ಸ್ಯಾಂಟ್ರೋ ರವಿಯನ್ನು ಪುಣೆಯಿಂದ ಗುಜರಾತ್‌ಗೆ ಏಕೆ ಕರೆದುಕೊಂಡು ಹೋದ್ರು? | JANATA NEWS

ಬೆಂಗಳೂರು : ಸ್ಯಾಂಟ್ರೋ ರವಿಯನ್ನು ಪುಣೆಯಿಂದ ಗುಜರಾತ್ ಗೆ ಏಕೆ ಕರೆದುಕೊಂಡು ಹೋದ್ರು? ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ನನಗೆ ಬಂದ ವರದಿ ಪ್ರಕಾರ ಅವನು ಮೊದಲು ಉಡುಪಿ ಹಾಗೂ ಕೇರಳದಲ್ಲಿದ್ದ. ಅಲ್ಲಿಂದ ಅಲ್ಲಿಂದ ಪುಣೆಗೆ ಹೋದ. ಬಳಿಕ ಪುಣೆದಿಂದ ಅವನನ್ನ ಗುಜರಾತಿಗೆ ಯಾರು ಕರೆದುಕೊಂಡು ಹೋದರು. ಸರ್ಕಾರ ಪ್ರಾಮಾಣಿಕ ತನಿಖೆ ನಡೆಸಿ ಸತ್ಯ ಹೇಳಲಿ. ಪುಣೆನಲ್ಲಿದ್ದವನನ್ನು ಅವರೇ ಏಕೆ ಕರೆದುಕೊಂಡು ಹೋದರು? ಪುಣೆಯಲ್ಲಿ ಅವನಿಗೆ ಹೇಳಿದ್ದೇನು..? ಗುಜರಾತಿನಿಂದ ಹೇಗೆ ವಿಮಾನ ಹತ್ತಿಸಿದ್ರು ಅದೆಲ್ಲ ಹೇಳಲಿ ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಲು ನಾನು ಕೆಲವೊಂದು ವಿಚಾರ ಪ್ರಸ್ತಾಪ ಮಾಡ್ತೀನಿ. ದಾಖಲೆ ಇಟ್ಟುಕೊಂಡಿರಲು ಆಗುದಿಲ್ಲ, ಕೆಲವು ವೈಯುಕ್ತಿಕ ವಿಚಾರ ಇರುತ್ತೆ. ಅದನ್ನು ಪ್ರಸ್ತಾಪ ಮಾಡುವುದು ಶೋಭೆಯಲ್ಲ. ಇಂತಹ ವ್ಯಕ್ತಿಗಳಿಂದ ಸರ್ಕಾರದ ಮೇಲೆ ದುಷ್ಪರಿಣಾಮ ಬೀರತ್ತಲ್ಲ ಅದು ನನ್ನ ಕಾಳಜಿ. ನಾನು ಹೇಳದಿದ್ದರೆ ಇಷ್ಟರವರೆಗೂ ಈ ಪ್ರಕರಣ ಹೊರ ಬರುತ್ತಿರಲಿಲ್ಲ ಎಂದರು.