ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆಗೆ ಚಾಕು ಇರಿದ ಆಟೋ ಚಾಲಕ! | JANATA NEWS

ಬೆಂಗಳೂರು : ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ಮಹಿಳೆಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರೋ ಘಟನೆ ಬೆಂಗಳೂರಿನ ಆರ್.ಟಿ ನಗರದಲ್ಲಿ ನಡೆದಿದೆ.
ಆರೋಪಿ ಶೇಕ್ ಮೆಹಬೂಬ್ (32)ನ್ನು ಪೊಲೀಸರು ಬಂಧಿಸಿದ್ದಾರೆ. ಚೂರಿ ಇರಿತಕ್ಕೊಳಗಾದ ಮಹಿಳೆಯನ್ನು ಹಬೀಬಾ ತಾಜ್ (30) ಎಂದು ಗುರುತಿಸಲಾಗಿದೆ. ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಬೀಬಾ ತಾಜ್ಗೆ ವಿವಾಹವಾಗಿದ್ದು 6 ವರ್ಷದ ಹಿಂದೆ ಪತಿ ತೀರಿ ಹೋಗಿದ್ದರು. ಎರಡು ಮಕ್ಕಳ ಜೊತೆಗೆ ವಾಸಮಾಡಿಕೊಂಡಿದ್ದ ಹಬೀಬಾಗೆ ಕಳೆದ ಕೆಲವು ವರ್ಷಗಳ ಹಿಂದೆ ಆರೋಪಿ ಶೇಕ್ ಮೆಹಬೂಬ್ನ ಪರಿಚಯವಾಗಿತ್ತು. ಆಟೋ ಚಾಲಕನಾಗಿರುವ ಶೇಕ್ ಮೆಹಬೂಬ್ಗೂ ಮದುವೆಯಾಗಿದ್ದು ಮಕ್ಕಳಿದ್ದಾರೆ. ಆದರೂ ಶೇಕ್ ಮೆಹಬೂಬ್ ಹಬೀಬಾಳೊಂದಿಗೆ ಸಲುಗೆಯಿಂದ ಇದ್ದ.
ಇತ್ತೀಚೆಗೆ ಹಬೀಬಾ ಬೇರೊಬ್ಬನ ಜೊತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಳು. ಇದನ್ನು ಶೇಖ್ ವಿರೋಧಿಸುತ್ತಲೇ ಇದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಕೂಡ ಆಗ್ತಾ ಇತ್ತು. ಅಕ್ರಮ ಸಂಬಂಧ ಸಾಕು ಎಂದಿದ್ದ ಹಬೀಬಾ ತಾಜ್ಗೆ ಶೇಕ್ ಮೆಹಬೂಬ್ ಚಾಕು ಇರಿದಿದ್ದಾನೆ. ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.