BMTC ಬಸ್ ಬೈಕ್ಗೆ ಡಿಕ್ಕಿ, ಬಸ್ ಅಡಿ ಸಿಲುಕಿ ಬೈಕ್ ಸವಾರ ಸಾವು | JANATA NEWS
ಬೆಂಗಳೂರು : BMTC ಬಸ್ ಅಡಿ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಕಾಮಾಕ್ಷಿಪಾಳ್ಯ ಸಮೀಪ ಸಂಭವಿಸಿದೆ.
ಮೃತ ಬೈಕ್ ಚಾಲಕನನ್ನು ವಿಜಯನಗರ ಕುಲದೀಪ್ ಬಗರೇಚಾ ಎಂದು ಗುರುತಿಸಲಾಗಿದೆ.
ಬ್ರಿಡ್ಜ್ ಬಳಿ ಮುಂದೆ ತೆರಳುತ್ತಿದ್ದ, ಬೈಕ್ಗೆ ಬಿಎಂಟಿಎಸ್ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸವಾರ ಕುಲದೀಪ್ ಬಗರೇಚಗೆ ಬಲವಾದ ಪೆಟ್ಟು ಬಿದ್ದಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಬೈಕ್ ಸವಾರ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
English summary :BMTC bus collides with bike, biker dies