ಆರು ವರ್ಷ ಪ್ರೀತಿಸಿ ನಿರಾಕರಿಸಿದ ಯುವತಿ, ಮನನೊಂದ ಯುವಕ ಆತ್ಮಹತ್ಯೆ | JANATA NEWS

ಬೆಂಗಳೂರು : ಆರು ವರ್ಷದ ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬೆಂಗಳೂರಿನ ಉಲ್ಲಾಳ ಉಪನಗರದಲ್ಲಿ ನಡೆದಿದೆ.
ರೋಹಿತ್ (25) ಮೃತ ಯುವಕ. ಮೃತ ಯುವಕನು ಕೊರಿಯರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಉಲ್ಲಾಳ ಉಪನಗರದ ನಿವಾಸಿ ರೋಹಿತ್ ಮತ್ತು ಕಾಲೇಜು ವ್ಯಾಸಾಂಗ ಮಾಡುತ್ತಿದ್ದ ಯುವತಿಯೋರ್ವಳು ಕಳೆದ ಆರು ವರ್ಷಗಳಿಂದ ಪರಷ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಭೇಟಿ ಮಾಡಿದಾಗ ಇಬ್ಬರ ನಡುವೆ ಗಲಾಟೆ ನಡೆದಿದೆ.
ಆರು ವರ್ಷಗಳ ಪ್ರೀತಿ ಮಾಡಿದ ಯುವತಿ ಬ್ರೇಕಪ್ ಮಾಡಿಕೊಳ್ಳೋಣ ಎಂದು ಯುವತಿ ಹೇಳಿದಕ್ಕೆ ಮನನೊಂದ ಯುವಕ ರೋಹಿತ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :A young woman who refused love for six years, an offended young man commits suicide