ಜಮ್ಮು ಮತ್ತು ಕಾಶ್ಮೀರ : ಅವಳಿ ಸ್ಫೋಟದಿಂದ ಒಂಬತ್ತು ಜನರು ಗಾಯ | JANATA NEWS

ಶ್ರೀನಗರ : ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಇಂದು ಶನಿವಾರ ಸಂಭವಿಸಿದ ಅವಳಿ ಸ್ಫೋಟದಿಂದ, ಕನಿಷ್ಠ ಒಂಬತ್ತು ಜನರು ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ 30 ನಿಮಿಷಗಳ ಅಂತರದಲ್ಲಿ ಎರಡು ತೀವ್ರತೆಯ ಸ್ಫೋಟಗಳು ಸಂಭವಿಸಿವೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಸಂಭವಿಸಿದ ಮೊದಲ ಸ್ಫೋಟದಲ್ಲಿ ಐವರು ಗಾಯಗೊಂಡಿದ್ದರು.
ಸುಮಾರು ಅರ್ಧ ಘಂಟೆಯ ನಂತರ, ಎರಡನೇ ಸ್ಫೋಟದಲ್ಲಿ, ಇಬ್ಬರು ಗಾಯಗೊಂಡರು.
ಸೇನೆಯ ಹಿರಿಯ ಅಧಿಕಾರಿಗಳು ಮತ್ತು ಭದ್ರತಾ ಪರಿಣಾಮ ವಿಶ್ಲೇಷಣೆ (ಎಸ್ಐಎ) ತಂಡಗಳು ಕೂಡ ಘಟನಾ ಸ್ಥಳಕ್ಕೆ ತಲುಪಿದ್ದಾರೆ.
English summary :Jammu and Kashmir: Nine people injured in twin blasts