ಸಿದ್ದರಾಮಯ್ಯಗೆ ಸುಳ್ಳು ರಾಮಯ್ಯ ಎಂದು ಹೆಸರಿಟ್ಟಿದ್ದೇನೆ | JANATA NEWS

ಚಿಕ್ಕಮಗಳೂರು : ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸುಳ್ಳು ರಾಮಯ್ಯ ಎಂದರೆ ಸರಿಯಾಗುತ್ತದೆ, ನಾನು ಇಟ್ಟಿರುವ ಹೊಸ ಹೆಸರು ಸುಳ್ಳು ರಾಮಯ್ಯ ಎಂದು ಸಿಟಿ ರವಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಪ್ರಧಾನ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಈಗ ಸಿದ್ದರಾಮಯ್ಯಗೆ ಹೊಸ ನಾಮಕರಣ ಮಾಡಿದ್ದು ಸುಳ್ಳು ರಾಮಯ್ಯ ಎಂದು ಕರೆದಿದ್ದಾರೆ.
'ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸುಳ್ಳು ರಾಮಯ್ಯ ಅನ್ನೋದು ಸೂಕ್ತ ಪದವಾಗುತ್ತೇ. ಬಾಯಿ ಬಿಟ್ಟರೆ ಸುಳ್ಳು. ಜನ ಇಟ್ಟಿದ್ದು ಸಿದ್ರಾಮುಲ್ಲಾ ಖಾನ್ ಅಂತ. ನಾನು ಇಟ್ಟಿರುವ ಹೆಸರು ಸುಳ್ಳುರಾಮಯ್ಯ ಎಂದು' ಎಂದಿದ್ದಾರೆ.
ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ, ಅದಕ್ಕೆ ಹಾಗಂತ ಹೆಸರು ಇಟ್ಟಿದ್ದೇನೆ ಎಂದು ಕಿಡಿಕಾರಿದರು. ಕಾಂಗ್ರೆಸ್ ನವರು ಲೂಟಿ ಮಾಡಲು ಜೆಸಿಬಿ ಹಿಡಿದು ಕೂತಿದ್ದಾರೆ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿಟಿ ರವಿ ಸಿಎಂ ಮನೆ ಹಾಳಾಗ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ತಿರುಗೇಟು ನೀಡಿದ ಸಿಟಿ ರವಿ ರಾಜಸ್ಥಾನ, ಹಿಮಾಚಲ ಪ್ರದೇಶ, ಛತ್ತೀಸಗಡದಲ್ಲಿ ಕಾಂಗ್ರೆಸ್ ಬಂದಿದೆ ಹಿಮಾಚಲ ಪ್ರದೇಶದಲ್ಲಿ ತೈಲ ಬೆಲೆ ಯಾಕೆ ಇಳಿಸಿಲ್ಲ ಎಂದು ಕಿಡಿಕಾರಿದರು.