ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು, ಸ್ಯಾಂಟ್ರೋ ರವಿಗೆ ಚಿಕಿತ್ಸೆ! | JANATA NEWS

ಬೆಂಗಳೂರು : ಅತ್ಯಾಚಾರ, ವೇಶ್ಯವಾಟಿಕೆ, ವಂಚನೆ ಹಾಗೂ ಅಕ್ರಮ ದಂದೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸದ್ದಾರೆ.
ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಸ್ಯಾಂಟ್ರೋ ರವಿ ಶುಗರ್ ಲೋ ಆಗೋದಕ್ಕೆ ಮಾತ್ರೆಯನ್ನ ತೆಗೆದುಕೊಳ್ತಾರೆ. ಆದರೆ ಸ್ಯಾಂಟ್ರೋ ರವಿ ಏಕಕಾಲಕ್ಕೆ 10 ಮಾತ್ರೆ ತೆಗದುಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಇಂದು ಸಂಜೆ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.
ಶುಗರ್, ಬಿಪಿ ಸೇರಿ ಹಲವು ಸಮಸ್ಯೆ ಯಿಂದ ಬಳಲುತ್ತಿರುವ ಸ್ಯಾಂಟ್ರೋ ರವಿ, ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ನಾ ಎಂಬ ಅನುಮಾನ ಮೂಡಿದೆ. ಸ್ಯಾಂಟ್ರೋ ರವಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಸಿಐಡಿ ಅಧಿಕಾರಿಗಳ ವಿಚಾರಣೆ ಎದುರಿಸಲು ಇಷ್ಟವಿಲ್ಲದ ಸ್ಯಾಂಟ್ರೋ ರವಿ ಸರಿಯಾಗಿ ಊಟ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಜೊತೆಗೆ ಪ್ರತಿದಿನ 12 ರಿಂದ 14 ಮಾತ್ರೆ, ಎರಡು ಶಾಟ್ ಇನ್ಸುಲಿನ್ ತೆಗದುಕೊಳ್ಳುತ್ತಾನೆ. ಶುಗರ್, ಕಿಡ್ನಿ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳಿಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾನೆ. ಸರಿಯಾದ ಊಟ ಮಾಡದೇ ಮಾತ್ರೆ ತೆಗೆದುಕೊಳ್ಳುತ್ತಿರುವುದರಿಂದ ಲೋ ಬಿಪಿ, ಸುಸ್ತಿನಿಂದ ಕುಸಿದು ಬಿದ್ದಿದ್ದ ಎಂದು ಮೂಲಗಳಿಂದ ತಿಳಿದುಬಂದಿದೆ.