ಜನವರಿ 30 ರಿಂದ ಯಲಹಂಕ ವಲಯದಲ್ಲಿ ಮಾಂಸ ಮಾರಾಟ ನಿಷೇಧ | JANATA NEWS

ಬೆಂಗಳೂರು : ಏರೋ ಇಂಡಿಯಾ 2023 ಪ್ರದರ್ಶನದ ಪ್ರಯುಕ್ತ ದಿನಾಂಕ: 30.01.2023 ರಿಂದ 20.02.2023 ರವರೆಗೆ ಮಾಂಸ ಮಾರಾಟವನ್ನು ಬಿಬಿಎಂಪಿ ಏರೋ ಇಂಡಿಯಾ ಪ್ರದರ್ಶನ ವ್ಯಾಪ್ತಿಯ ಸುತ್ತಾಮುತ್ತ ನಿಷೇಧಿಸಿ ಆದೇಶಿಸಿದೆ.
ಕೇಂದ್ರ ರಕ್ಷಣಾ ಸಚಿವಾಲಯ ಬೆಂಗಳೂರಿನ ಯಲಹಂಕದಲ್ಲಿರುವ ವಾಯುನೆಲೆಯಲ್ಲಿ ಮುಂದಿನ ತಿಂಗಳು ಫೆಬ್ರುವರಿ 13ರಿಂದ ಫೆಬ್ರುವರಿ 17ರವರೆಗೆ ಅಂತಾರಾಷ್ಟ್ರೀಯ ಏರೋ ಇಂಡಿಯಾ 2023 (ವೈಮಾನಿಕ ಪ್ರದರ್ಶನ) ಹಮ್ಮಿಕೊಂಡಿದೆ.
ಇದರ ಅಂಗವಾಗಿ ಯಲಹಂಕ ವಲಯ ವ್ಯಾಪ್ತಿಯಲ್ಲಿರುವ ಎಲ್ಲ ಮಾಂಸದ ಮಳಿಗೆಗಳಲ್ಲಿ ಜನವರಿ 30 ರಿಂದಲೇ ರಿಂದ ಫೆಬ್ರುವರಿ 20ರವರೆಗೆ ಯಲಹಂಕ ವಲಯದ ವ್ಯಾಪ್ತಿಯಲ್ಲಿರುವ ಎಲ್ಲ ತರಹದ ಮಾಂಸ ಮಾರಾಟ ನಿಷೇಧಿಸಲಾಗಿದೆ. ಇಷ್ಟೇ ಅಲ್ಲದೇ ಹೋಟೇಲ್ ಹಾಗೂ ರೆಸ್ಟೋರೆಂಟ್/ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನೂ ಸಹ ಬಿಬಿಎಂಫಿ ನಿಷೇಧಿಸಿದೆ.
ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಎರ್‌ಕ್ರಾಫ್ಟ್ ರೂಲ್ಸ್ 1937ರ ರೂಲ್ 91 ರೀತ್ಯ ಬಿಬಿಎಂಪಿಯಿಂದ ಈ ಆದೇಶ ಹೊರಬಿದ್ದಿದೆ.
ಇದನ್ನು ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಎರ್‌ಕ್ರಾಪ್ಟ್ ರೂಲ್ಸ್ 1937 ರ ರೂಲ್ 91 ರೀತ್ಯಾ ಕ್ರಮವಹಿಸಲಾಗುವುದೆಂದು ಯಲಹಂಕ ವಲಯ ಜಂಟಿ ಆಯುಕ್ತರಾದ ಪೂರ್ಣಿಮ ರವರು ತಿಳಿಸಿದ್ದಾರೆ.