ಭವಾನಿ ರೇವಣ್ಣಗೆ ಪಕ್ಷ ಇಲ್ವಾ? ಹೇಳೋರು ಕೇಳೋರು ಇಲ್ವಾ? | JANATA NEWS

ಬಾಗಲಕೋಟೆ : ಭವಾನಿ ರೇವಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಚರ್ಚೆಗಳಿಗೆ ಸಂಬಂಧಿಸಿ ಬಾಗಲಕೋಟೆಯಲ್ಲಿ ಮಾತನಾಡಿರುವ ಈಶ್ವರಪ್ಪ, ಇಂದು ರಾಜಕೀಯ ಸ್ಥಾನಕ್ಕೆ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು ಎಂಬ ನಿಲುವು ಇದೆ. ಹಾಸನದಲ್ಲಿ ಭವಾನಿ ರೇವಣ್ಣ ಅವರೇ ಅಭ್ಯರ್ಥಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಅವರಿಗೇನು ಪಕ್ಷ ಇಲ್ವಾ? ಹೇಳೋರು ಕೇಳೋರು ಇಲ್ವಾ? ಎಂದು ಮಾಜಿ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.
ಒಂದು ಕಡೆ ಅನಿತಾ ಕುಮಾರಸ್ವಾಮಿ ಅವರ ಮಗನನ್ನ ಚುನಾವಣಾ ಅಭ್ಯರ್ಥಿ ಅಂತಾ ಘೋಷಣೆ ಮಾಡ್ತಾರೆ. ಅವರವರೇ ತಮ್ಮನ್ನ, ತಮ್ಮ ಮಕ್ಕಳನ್ನ ಘೋಷಣೆ ಮಾಡಿದ್ರೆ ಹೇಗೆ? ಹೀಗಾದ್ರೆ ಒಂದು ಪಕ್ಷ ಅಂತಾ ಯಾಕೆ ಇರಬೇಕು? ಚುನಾವಣೆ ಸಮಿತಿ ಯಾಕೆ ಬೇಕು? ಇದು ಒಳ್ಳೆಯ ಬೆಳವಣಿಗೆ ಅಲ್ಲ, ಬಿಜೆಪಿಯಲ್ಲಿ ಇಂತಹ ವ್ಯವಸ್ಥೆ ಇಲ್ಲ. ಪಾರ್ಟಿ ಗುರುತಿಸಿ ಟಿಕೆಟ್ ನೀಡುತ್ತೇ ಎಲ್ಲರೂ ಶ್ರಮಿಸಿ ಗೆಲ್ಲುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.