ಸಿದ್ದು ಅವರನ್ನು ಜೀವಂತವಾಗಿ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ, ಇನ್ನು ಸಿದ್ದು ಹೆಣ ತೆಗೆದುಕೊಂಡು ನಾವು ಏನು ಮಾಡಬೇಕು | JANATA NEWS

ಶಿವಮೊಗ್ಗ : ಜೆಡಿಎಸ್ ಅಧಿಕಾರಕ್ಕಾಗಿ ಸಿದ್ಧಾಂತಗಳನ್ನ ತ್ಯಜಿಸಿ ಹೋಗುತ್ತೆ. ಆದರೆ, ತನ್ನನ್ನ ರಾಷ್ಟ್ರಪತಿ, ಪ್ರಧಾನಿ ಮಾಡಿದ್ರೂ ಸಹ ಬಿಜೆಪಿ - ಆರ್ ಎಸ್ ಎಸ್ ಜೊತೆ ತನ್ನ ಹೆಣ ಕೂಡ ಸೇರಲ್ಲ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ಹರಿಹಾಯ್ದಿದ್ದಾರೆ.
ಕಟೀಲ್ ಬಫೂನ್ ಎಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಸ್ಥಾನದ ಗೌರವ ಉಳಿಸಿಕೊಳ್ಳಬೇಕಿರುವುದು ಅವರ ಜವಾಬ್ದಾರಿ. ಸಿದ್ದರಮಯ್ಯ ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷದ ನಾಯಕರು ಕೂಡಾ ಆಗಿದ್ದಾರೆ. ಆಡಳಿತ ಪಕ್ಷದ ಅಧ್ಯಕ್ಷರ ವಿರುದ್ಧ ಇಂತಹ ಪದ ಬಳಕೆ ಸರಿಯಲ್ಲ. ನನಗೂ ಸಿದ್ದರಾಮಯ್ಯ ಕುರಿತು ಹೇಳಲು ಬರುತ್ತೆ. ಆದರೆ ನಾನು ಅದನ್ನು ಹೇಳಲ್ಲ. ಕಟೀಲ್ ರಾಜ್ಯಾಧ್ಯಕ್ಷರಾಗಿ ಉತ್ತಮ ಕೆಲಸ ಮಾಡ್ತಿದ್ದಾರೆ. ಚುನಾವಣೆ ನಂತರ ಅವರಿಗೇ ಎಲ್ಲ ಗೊತ್ತಾಗುತ್ತೆ ಎಂದರು.
ಸಿದ್ದು ಅವರನ್ನು ಜೀವಂತವಾಗಿ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ. ಇನ್ನು ಸಿದ್ದು ಹೆಣ ತೆಗೆದುಕೊಂಡು ನಾವು ಏನು ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ಅವರ ಹೆಣ ನಾಯಿ ಕೂಡ ಮೂಸಲ್ಲ. ಸಿದ್ದರಾಮಯ್ಯ ಹಣೆಬರಹ ಮತದಾರರಿಗೆ ಗೊತ್ತು. ಈ ಮನುಷ್ಯ ನಂಬಿಗಸ್ತ ಅಲ್ಲ, ಸುಧಾರಿಸಲ್ಲ. ಚುನಾವಣೆಯಲ್ಲಿ ಸೋಲಿಸ್ತಾರೆ ಎಂಬ ಒಂದೇ ಕಾರಣಕ್ಕೆ ಕ್ಷೇತ್ರ ಹುಡುಕ್ತಿದ್ದಾರೆ. ಮಾಜಿ ಸಿಎಂ ಹುಚ್ಚರ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸುಮಲತಾ ಬಗ್ಗೆ ರಾಷ್ಟ್ರೀಯ ನಾಯಕರು ವಿಚಾರ ಮಾಡ್ತಾರೆ. ಅವರ ಬಗ್ಗೆ ರಾಷ್ಟ್ರೀಯ ನಾಯಕರು ವಿಚಾರ ಮಾಡ್ತಾರೆ. ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಬಿಟ್ರೆ ಬೇರೆ ಪಕ್ಷ ಅಧಿಕಾರಕ್ಕೆ ಬರಲ್ಲ.ಈ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತೆ ಎಂದರು.