ಇನ್ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ನಗ್ನ ಚಿತ್ರ ಪಡೆದು ಬ್ಲ್ಯಾಕ್ಮೇಲ್ | JANATA NEWS

ಬೆಂಗಳೂರು : ಇನ್ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ವಿವಿಧ ಕಾರಣ ಹೇಳಿ ಅವರ ನಗ್ನ ಫೋಟೊಗಳ ಪಡೆದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿಯನ್ನು ಆಗ್ನೆಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ದಿಲ್ಲಿ ಪ್ರಸಾದ್ (26) ಬಂಧಿತ ಆರೋಪಿ. ಆಂಧ್ರ ಮೂಲದ ಆರೋಪಿ ದಿಲ್ಲಿ ಪ್ರಸಾದ್ 2018 ರಿಂದ ಬೆಂಗಳೂರಿನಲ್ಲಿ ವಾಸವಿದ್ದಾನೆ. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದನು.
ಮೋನಿಕಾ ಹಾಗೂ ಮ್ಯಾನೇಜರ್ ಎಂಬ ಹೆಸರಿನಲ್ಲಿ ಎರಡು ನಕಲಿ ಇನ್ಸ್ಟಾಗ್ರಾಂ ಖಾತೆ ತೆರದಿದ್ದ. ಇದರಲ್ಲಿ ಯುವತಿಯರನ್ನು ಸಂಪರ್ಕಿಸಿ, ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಈತನ ಮಾತಿಗೆ ಮರುಳಾದ ಮಹಿಳೆಯರು ಕೆಲಸದ ಆಸೆಯಿಂದ ಹೇಳಿದಂತೆ ಕೇಳುತ್ತಿದ್ದರು.
ನಂತರ ಯುವತಿಯರಲ್ಲಿ ವಿವಿಧ ಕಾರಣ ಹೇಳಿ ಅವರ ನಗ್ನ ಫೋಟೊಗಳನ್ನು ಪಡೆದುಕೊಳ್ಳುತಿದ್ದ. ಬಳಿಕ ಆ ಫೋಟೋಗಳನ್ನು ಬಳಸಿ ಬೆದರಿಸಿ ಬೇರೊಬ್ಬರ ಜತೆಗೆ ಲೈಂಗಿಕ ಕ್ರಿಯೆ ಮಾಡುವಂತೆ ಒತ್ತಾಸುತ್ತಿದ್ದ. ಈತ ಹೇಳಿದ ವ್ಯಕ್ತಿಗೆ ಭೇಟಿಯಾಗುವಂತೆ ಯುವತಿಯರಿಗೆ ಹೇಳುತ್ತಿದ್ದನು.
ಇದರಂತೆ ಓರ್ವ ಯುವತಿ ಬ್ಯ್ಲಾಕ್ಮೇಲ್ಗೆ ಒಳಗಾಗಿ ಮಡಿವಾಳದ ಓಯೋ ರೂಂನಲ್ಲಿ ಲೈಂಗಿಕ ಕ್ರಿಯೆ ವೇಳೆ ವೀಡಿಯೋ ಮಾಡಿಕೊಂಡಿದ್ದಾನೆ.
ವೀಡಿಯೋ ಬಳಸಿಕೊಂಡು ಯುವತಿಯಿಂದ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ತಾನು ಕೇಳಿದಷ್ಟು ಹಣ ಕೊಡಲೇ ಹೋದಲ್ಲಿ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.