ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ, ಬೈಕ್ ಸವಾರನ ತಲೆ ಮೇಲೇ ಹರಿದು ಹೋದ ಕಾರು! | JANATA NEWS

ಬೆಂಗಳೂರು : ಕಾರೊಂದು ದ್ವಿಚಕ್ರವಾಹನ ಸವಾರನ ತಲೆ ಮೇಲೇ ಹಾದು ಹೋದ ಘಟನೆ ಸಿಲಿಕಾನ್ ಸಿಟಿಯ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ನಡೆದಿದೆ.
ಮೃತ ವ್ಯಕ್ತಯನ್ನು ಎಚ್ಎಸ್ಆರ್ ಬಡಾವಣೆ ನಿವಾಸಿ ಮಾಜಿದ್ ಖಾನ್ (39) ಎಂದು ಗುರುತಿಸಲಾಗಿದೆ. ಅತೀ ವೇಗವಾಗಿ ಬಂದ ಕಾರ್ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದಿದೆ. ಆ ಬಳಿಕ ದ್ವಿಚಕ್ರ ವಾಹನ ಸವಾರನ ತಲೆ ಮೇಲೆ ಕಾರು ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇನ್ನೊಬ್ಬ ವ್ಯಕ್ತಿ ರಿಯಾಜ್ ಎಂಬಾತನ ಕಾಲು ಮುರಿದಿದ್ದು, ತಲೆಗೂ ಗಾಯವಾಗಿದೆ. ಈತನನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಇನ್ನೂ ಮೂವರಿಗೆ ಗಾಯಗಳಾಗಿವೆ.
ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.