ಕೊಡಲಿಯಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ | JANATA NEWS

ಗದಗ : ಪತ್ನಿಯನ್ನು ಕೊಡಲಿಯಿಂದ ಬರ್ಬರವಾಗಿ ಕೊಲೆಗೈದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದಲ್ಲಿ ಇಂದು ನಡೆದಿದೆ.
ವಿದ್ಯಾ ಮೌನೇಶ ಆಡಿನ (24 ವ) ಕೊಲೆಯಾಗಿರುವ ದುರ್ದೈವಿ. ಮೌನೇಶ ಆಡಿನ ತನ್ನ ಹೆಂಡತಿಯನ್ನು ಕೊಡಲಿಗಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿ.
ಕೌಟುಂಬಿಕ ಕಲಹ ಹಿನ್ನೆಲೆ ಮೌನೇಶ ಪತ್ನಿ ವಿದ್ಯಾ ಳನ್ನು ಕೊಲೆ ಮಾಡಿದ್ದಾನೆ. 8 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ವಿದ್ಯಾಶ್ರೀ ಮನ್ನೇಶ್, ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಪದೆ ಪದೆ ಜಗಳ ಮಾಡ್ತಿದ್ದರಂತೆ. ಆದರೆ ಇಂದು ಜಗಳ ವಿಕೋಪಕ್ಕೆ ಹೋಗಿ ಪತಿ ಮನ್ನೇಶ್ ಪತ್ನಿಯನ್ನ ಕೊಚ್ಚಿ ಕೊಲೆ ಮಾಡಿದ್ದಾನೆ.
ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ.
English summary :The barbaric killing of his wife by chopping him with an axe