ಭಾರತದಲ್ಲಿ ಫೈಜರ್ ಲಸಿಕೆ ಪಡೆಯುವ ನಮ್ಮ ಎಲ್ಲಾ ಪ್ರಯತ್ನಗಳನ್ನು ನಿಲ್ಲಿಸಲಾಗಿದೆ - ತೆಲಂಗಾಣ ಸಿಎಂ | JANATA NEWS

ನವದೆಹಲಿ : ಭಾರತ ಕೋವಿಡ್ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದ ಸಂದರ್ಭದಲ್ಲಿ ದೇಶದ ಲಸಿಕೆ ಗಳೊಂದಿಗೆ ಅಮೇರಿಕಾ ಕಂಪನಿಯಾದ ಪಿಸರ್ ಲಸಿಕೆ ಯನ್ನು ಭಾರತದ ಮಾರುಕಟ್ಟೆ ಪ್ರವೇಶಿಸಲು ಅನುವು ಮಾಡು ಕೊಡಲು ತಮ್ಮನ್ನು ಸೇರಿ ಅನೇಕ ರಾಜ್ಯದ ಮುಖ್ಯಮಂತ್ರಿಗಳು ಎಷ್ಟೇ ಪ್ರಯತ್ನಿಸಿದರು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಸಿಸರ್ ಅನ್ನು ಭಾರತದ ಮಾರುಕಟ್ಟೆ ಪ್ರವೇಶಿಸದಂತೆ ತಡೆಹಿಡಿದಿದ್ದಾರೆ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರ ಮೇಕಿನ್ ಇಂಡಿಯಾ ಯೋಜನೆಯ ನೀತಿಯನ್ನು ದೂಷಿಸುವ ಬರದಲ್ಲಿ ಸಿಎಂ ಚಂದ್ರಶೇಖರ್ ರಾವ್ ಅವರು ಭಾರತದಲ್ಲಿ ಅಮೆರಿಕದ ವಿವಾದಿತ ಫಾರ್ಮಸಿಟಿಕಲ್ ಕಂಪನಿ ಯಾದ ಫೀಸೆರ್ ಲಸಿಕೆಯನ್ನು ಭಾರತದ ಮಾರುಕಟ್ಟೆ ಪ್ರವೇಶ ನೀಡುವ ಸಲುವಾಗಿ ತಾವು ಶತಾಯಗತಾಯ ಪ್ರಯತ್ನ ಮಾಡಿರುವುದಾಗಿ ಒಪ್ಪಿಕೊಂಡಂತಾಗಿದೆ.
ಸಭೆಯೊಂದನ್ನು ಉದ್ದೇಶಿ ಮಾತನಾಡಿದ ಅವರು, ಜನರು ಅತ್ಯುತ್ತಮ ಲಸಿಕೆ ಸಿಗಲೆಂದು ಬಯಸುತ್ತಿದ್ದರು, ಖರೀದಿಸಲು ಕೂಡ ಸಿದ್ದರಿದ್ದರು. ಆದರೆ, ಯಾವ ಕಾರಣಕ್ಕೆ ಫೀಸೆರ್(ಕಂಪೆನಿ)ಯನ್ನು ತಡೆಹಿಡಿಯಲಾಯಿತು? ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ತುರ್ತು ಪರಿಸ್ಥಿತಿಯ ಬಳಿಕ ಅಮೆರಿಕದಲ್ಲಿ ಅವರ ದೇಶದ ಸ್ವಂತ ಲಸಿಕಾ ಕಂಪನಿ ಆದ ಫೀಸೆರ್ ಗುಣಮಟ್ಟದ ಬಗ್ಗೆ ಅನೇಕ ಆರೋಪ ಅನುಮಾನ ವ್ಯಕ್ತವಾಗಿದ್ದು, ಹಲವಾರು ವ್ಯತಿರಿಕ್ತ ಪರಿಣಾಮ ಎದುರಿಸಿರುವ ಪ್ರಕರಣಗಳು ವರದಿಯಾಗಿತ್ತು.