ಪತ್ನಿಯ ಶೀಲ ಶಂಕಿಸಿ, ಮಕ್ಕಳಿಬ್ಬರನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ | JANATA NEWS

ರಾಯಚೂರು : ಪತ್ನಿಯ ಶೀಲಶಂಕಿಸಿ ಮಕ್ಕಳಾದ ಶಿವರಾಜ್(5) ಹಾಗೂ ರಾಜು(3)ನನ್ನ ಕತ್ತು ಹಿಸುಕಿ ಕೊಂದಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಜಕ್ಕಲದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಶಿವರಾಜ್ (3) ರಾಘವೇಂದ್ರ (5) ಕೊಲೆಯಾದ ಮಕ್ಕಳು. ನಿಂಗಪ್ಪ ತಿರುಮಲಯ್ಯ ಕೊಲೆ ಮಾಡಿದ ಪಾಪಿ ತಂದೆ.
ಮಕ್ಕಳನ್ನ ಕಳೆದುಕೊಂಡ ತಾಯಿಯ ಆಕ್ರಂಧನ ಮುಗಿಲು ಮುಟ್ಟಿದೆ. ಅ ಕ್ರಮ ಸಂಬಂಧ ಆರೋಪ ಹೊರಿಸಿ, ನಿಂದಿಸಿದ್ದಲ್ಲದೆ, ಎರಡೂ ಮಕ್ಕಳು ನನಗೆ ಹುಟ್ಟಿಲ್ಲ, ಅವರನ್ನು ಸಾಯಿಸುತ್ತೇನೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದನು.
ಇದಾದ ಬಳಿಕ ಮಕ್ಕಳಿಬ್ಬರನ್ನು ಕೆ. ಇರಬಗೇರಾದಿಂದ ಜಕ್ಲೇರದೊಡ್ಡಿಗೆ ಕರೆದೊಯ್ದು, ತನ್ನ ಕೈಗಳಿಂದ ಕುತ್ತಿಗೆಯನ್ನು ಹಿಸುಕಿ ಮಕ್ಕಳಿಬ್ಬರು ಕೊಲೆ ಮಾಡಿದ್ದು, ನನ್ನ ಗಂಡನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಪತ್ನಿ ಉಲ್ಲೇಖಿಸಿದ್ದಾಳೆ.
ಇನ್ನು ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆ ನಿಂಗಪ್ಪನನ್ನ ಬಂಧಿಸಲಾಗಿದೆ.