ಮೈಸೂರು ಒಡೆಯರ್ ಸ್ಥಾಪಿಸಿದ್ದ ಪ್ರತಿಷ್ಠಿತ ಭದ್ರಾವತಿ ಉಕ್ಕಿನ ಕಾರ್ಖಾನೆ ಬಂದ್: ಕೇಂದ್ರ ಸರ್ಕಾರದಿಂದ ಅಧಿಕೃತ ಮಾಹಿತಿ | JANATA NEWS

ಭದ್ರಾವತಿ : ಕಬ್ಬಿಣದ ಅದಿರಿನ ಅಲಭ್ಯತೆ, ಬಳಕೆಯಲ್ಲಿಲ್ಲದ ತಂತ್ರಜ್ಞಾನದಿಂದಾಗಿ ಹೆಚ್ಚಿನ ವೆಚ್ಚ ಮತ್ತು ಕಡಿಮೆ ಉತ್ಪಾದನೆಯಿಂದಾಗಿ ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಐರನ್ ಆಯಂಡ್ ಸ್ಟೀಲ್ ಲಿಮಿಟೆಡ್ (ವಿಐಎಸ್‌ಎಲ್)ನ್ನು ಮುಚ್ಚಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡಿದೆ.
ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಇಲಾಖೆಯ ಸಹಾಯಕ ಸಚಿವ ಭಾಗವತ್ ಕಾರಡ್ ಅವರು, ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಮುಚ್ಚಲು ನಿರ್ಧರಿಸಿರುವುದಾಗಿ ಅಧಿಕೃತ ಹೇಳಿಕೆ ನೀಡಿದರು. ಇದರೊಂದಿಗೆ, ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಖಾನೆಯ ಸಹಸ್ರಾರು ಕಾರ್ಮಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಹೋರಾಟ ನಿಷ್ಫಲವಾದಂತಾಗಿದೆ.
ಲೋಕಸಭೆಯಲ್ಲಿ ತಿಳಿಸಿರುವ ಕಾರಡ್, ಭದ್ರಾವತಿ ಕಾರ್ಖಾನೆಯನ್ನು ಖರೀದಿ ಮಾಡಲು ಕೆಲವು ಕಂಪನಿಗಳು ಒಲವು ಹೊಂದಿದ್ದರೂ ಕಾರ್ಖಾನೆಯ ಸದ್ಯದ ಸ್ಥಿತಿಗತಿಗಳನ್ನು ಗಮನಿಸಿ ಬಂಡವಾಳ ಹೂಡಲು ಹಿಂದೇಟು ಹಾಕಿದವು. ಅವರು ಯಾರೂ EOI ಅರ್ಜಿ ಸಲ್ಲಿಸಲಿಲ್ಲ. ಹಾಗಾಗಿ, ಕಾರ್ಖಾನೆ ಮುಚ್ಚುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದು ವಿವರಿಸಿದರು.
ಬಿಡ್ ಸಲ್ಲಿಸಿದ ಯಾರು ಕೂಡ ಕಾರ್ಖಾನೆ ಖರೀದಿಸಲು ಬರುತ್ತಿಲ್ಲ. 12,000 ಜನರಿಗೆ ಕೆಲಸ ನೀಡಿದ್ದ ಸರ್ಕಾರಿ ಸ್ವಾಮ್ಯದ VISL ಇದೀಗ ಬಂದ್ ಆಗಿದೆ. ಕಾರ್ಖಾನೆಯಲ್ಲಿನ ಯಂತ್ರಗಳು ಹಳತಾಗಿದೆ, ಕುಲುವೆ ಮುಚ್ಚಲಾಗಿದೆ. ನಿರಂತರ ಕಾರ್ಖಾನೆ ನಷ್ಟದಲ್ಲಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಕುರಿತು ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಭಾಗವಾತ್ ಕರಾಡ್ ಹೇಳಿಕೆ ನೀಡಿದ್ದಾರೆ.