ಯುದ್ಧವಿಮಾನದಿಂದ ಹನುಮಂತನ ಚಿತ್ರ ತೆಗೆದ ಎಚ್‌ಎಎಲ್! | JANATA NEWS

ಬೆಂಗಳೂರು : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2023 ಈವೆಂಟ್‌ನಲ್ಲಿ ಪ್ರದರ್ಶಿಸಲಾದ HLFT-42 ವಿಮಾನದ ಮಾದರಿಯಿಂದ ಭಗವಾನ್ ಹನುಮಾನ್ ಚಿತ್ರವನ್ನು ತೆಗೆದು ಹಾಕಿದೆ.
ಯುದ್ಧವಿಮಾನ HLFT-42 ಯ ಹಿಂಬದಿಯ ಮೇಲ್ಮುಖ ರೆಕ್ಕೆಯ ಭಾಗದಲ್ಲಿ ಹನುಮಂತನ ಚಿತ್ರ ಅಂಟಿಸಲಾಗಿತ್ತು. ಆದ್ರೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಎಚ್‌ಎಎಲ್ ಅದನ್ನು ತೆರವು ಮಾಡಿದೆ. ಎಚ್‌ಎಎಲ್ ಬಿಡುಗಡೆಗೊಳಿಸಿದ ಮಾರನೇ ದಿನವೇ ಈ ಘಟನೆ ನಡೆದಿದೆ.
ಮಾರುತಿಯ ವೇಗ, ಸಾಹಸ, ಶಕ್ತಿಯ ಪ್ರತೀಕವೆಂದು ಏರ್‌ಕ್ರಾಫ್ಟ್ನಲ್ಲಿ ಈ ಚಿತ್ರ ಬರೆಯಲಾಗಿತ್ತು. ಈ ಯುದ್ಧವಿಮಾನವೂ ಇಷ್ಟೇ ಶಕ್ತಿಶಾಲಿ ಎಂಬ ಮಾದರಿಯಲ್ಲಿ ಈ ಚಿತ್ರ ಬಿಡಿಸಲಾಗಿತ್ತು.
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಾಣ ಮಾಡಿರುವ HLFT-42 ಯುದ್ಧವಿಮಾನದಲ್ಲಿ ಹನುಮಾನ್ ಚಿತ್ರ ರಚಿಸಿ ಪ್ರದರ್ಶನಕ್ಕಿಟ್ಟಿದ್ದರು. ಇದನ್ನು ಮಂಗಳವಾರ ತೆಗೆಯಲಾಗಿದೆ.