ಮದ್ಯ ಸೇವನೆಗೆ ಹಣ ಕೊಟ್ಟಿಲ್ಲ ಎಂದು ತಾತನನ್ನೇ ಹತ್ಯೆಗೈದ ಮೊಮ್ಮಗ | JANATA NEWS

ಬೆಂಗಳೂರು : ಮದ್ಯ ಸೇವನೆಗೆ ಹಣ ಕೊಡಲಿಲ್ಲವೆಂಬ ಕಾರಣಕ್ಕೆ ತಾತನ ಮೇಲೆ ಮೊಮ್ಮಗ ದೊಣ್ಣೆಯಿಂದ ಹಲ್ಲೆ ನಡೆಸಿ ಕತ್ತು ಹಿಚುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಮ್ಮನಹಳ್ಳಿ ಕೋಳಚೆ ಪ್ರದೇಶದ ನಿವಾಸಿ ಜೋಸೆಫ್ (54) ಮೃತ ವ್ಯಕ್ತಿ. ಈತನ ಮೊಮ್ಮಗ ಆರೋಪಿ ಆಂಟೋಣಿ ಎಂಬಾತನನ್ನು ಬಂಧಿಸಲಾಗಿದೆ.
ಅಕ್ಕನ ಮಗ ಆಂಟೋಣಿಯನ್ನು ಜೋಎಫ್ ತನ್ನ ಮನೆಯಲ್ಲಿ ಇಟ್ಟುಕೊಂಡು ಬೆಳೆಸಿದ್ದ. ಗಾರೆ ಕೆಲಸ ಮಾಡುತ್ತಿದ್ದ ಆಂಟೋಣಿ, ಮದ್ಯ ವ್ಯಸನಿಯಾಗಿದ್ದ. ಸೋಮವಾರ ರಾತ್ರಿ, ಮನೆಯಲ್ಲಿ ತಾತನ ಬಳಿ ಮದ್ಯ ಸೇವನೆಗೆ ಹಣ ಕೊಡುವಂತೆ ಕೇಳಿದ್ದ. ಅದಕ್ಕೆ ಜೋಸೆಫ್, ಹಣ ಇಲ್ಲವೆಂದು ಹೇಳಿದಾಗ ಮೊಮ್ಮಗ ಜಗಳ ತೆಗೆದಿದ್ದಾನೆ.
ಹಣ ಕೊಡಲಿಲ್ಲವೆಂದು ಕೋಪಗೊಂಡ ಆಂಟೋಣಿ, ಕೊನೆಗೆ ದೊಣ್ಣೆಯಿಂದ ತಾತನ ತಲೆಗೆ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜೋಸೆಫ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಗಂಭೀರವಾಗಿ ಗಾಯಗೊಂಡಿದ್ದ ಜೋಸೆಫ್ ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ದಾಖಲಿದ ಜೋಸೆಫ್ರನ್ನು ವೈದ್ಯರು ಪರೀಕ್ಷಿಸಿದಾಗ ಅವರು ದಾರಿ ಮಧ್ಯೆ ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. ನಂತರ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಆಂಟೋಣಿಯನ್ನು ಬಂಧಿಸಲಾಗಿದೆ