ಮಾಜಿ ಗ್ರಾ.ಪಂಚಾಯತಿ ಸದಸ್ಯನಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ: ಪೊಲೀಸ್ ಠಾಣೆಗೆ ದೂರು | JANATA NEWS

ರಾಯಚೂರು : ಮಾಜಿ ಗ್ರಾ.ಪಂಚಾಯತಿ ಸದಸ್ಯನಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಅದೇ ಗ್ರಾಮದ ಮಹಿಳೆಯರು ಮನೆಯಿಂದ ಹೊಲಕ್ಕೆ ಹೋಗುವಾಗ ಟಾರ್ಚರ್ ನೀಡುತ್ತಿದ್ದನಂತೆ, ಜೊತೆಗೆ ಅಂಗಡಿ ಮುಂಗಟ್ಟುಗಳಿಗೆ ಹೋದರು ಫಾಲೋ ಮಾಡಿಕೊಂಡು ಬಂದು ಕಿರಕುಳ ಕೊಡುತ್ತಿರುವುದಾಗಿ ಆರೋಪ ಕೇಳಿ ಬಂದಿದ್ದು, ಇದೀಗ ಗ್ರಾ.ಪಂ. ಸದಸ್ಯನ ವಿರುದ್ಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಮಹಿಳೆಯರು ಪ್ರಕರಣ ದಾಖಲಿಸಿದ್ದಾರೆ.
ಮಹಿಳೆಯರು ಬಹಿರ್ದೆಸೆ ಹೋಗುವ ವೇಳೆ ಹಿಂದೆ ಹೋಗುತ್ತಿದ್ದ ಈತ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ರಾಜೇಶ್ವರಿ ಎಂಬ ಮಹಿಳೆ ಮೇಲೆ ಈತ ಸಿಗರೇಟಿನಿಂದ ಸುಟ್ಟು ವಿಕೃತಿ ಮೆರೆದಿದ್ದಾನೆ. ಬಳಿಕ ಆರೋಪಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದರ ಜೊತೆಗೆ ಸುಖಾ ಸುಮ್ಮನೆ ಫೋನ್ನಲ್ಲಿ ಮಾತನಾಡಿರುವ ಆಡಿಯೋ ಇವೆ ಎಂದು ಬೆದರಿಕೆ ಹಾಕಿ, ಹೇಳಿದಂತೆ ಕೇಳಲೇ ಬೇಕು, ಇಲ್ಲದಿದ್ರೆ ಆಡಿಯೋ ವೈರಲ್ ಮಾಡೋದಾಗಿ ಬ್ಲಾಕ್ ಮೇಲ್ ಕೂಡ ಮಾಡಿದ್ದಾನೆ. ಇದರಿಂದ ನೊಂದ ಮಹಿಳೆಯರು ಇದೀಗ ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.