ಅವನಿಗೆ ಮಾನಸಿಕ ಖಾಯಿಲೆ ಇರಬೇಕು. ಅವನು ಅಶ್ವಥ್ ನಾರಾಯಣ ಅಲ್ಲ, ಅಸ್ವಸ್ಥ ನಾರಾಯಣ ಇರಬೇಕು | JANATA NEWS

ಕೊಪ್ಪಳ : ಅವನಿಗೆ ಮಾನಸಿಕ ಖಾಯಿಲೆ ಇರಬೇಕು. ಅವನು ಅಶ್ವಥ್ ನಾರಾಯಣ ಅಲ್ಲ, ಅಸ್ವಸ್ಥ ನಾರಾಯಣ ಇರಬೇಕು. ಅವನು ನನ್ನ ಬಗ್ಗೆ ಹೇಳುತ್ತಾನೆ, ಅವನಿಗೆ ತಲೆ ಸರಿಯಲ್ಲ. ಇವರೆಲ್ಲಾ ನಾಲಾಯಕ್ ರಾಜಕಾರಣಿಗಳು. ಇಂಥವರು ಅಧಿಕಾರದಲ್ಲಿ ಇರಬೇಕಾ ಎಂದರು.
ಈ ಕುರಿತು ಕೊಪ್ಪಳದಲ್ಲಿ ಮಾತನಾಡಿದ ಅವರು, ಸಚಿವ ಅಶ್ವಥ್ ನಾರಾಯಣ ಎನ್ನುವಾತ ಟಿಪ್ಪುವನ್ನು ಹೊಡೆದು ಹಾಕಿದಂತೆ ನನ್ನನ್ನು ಹೊಡೆದಾಕಬೇಕು ಎಂದು ಹೇಳಿದ್ದಾನೆ. ಅವನು ಅಶ್ವಥ್ ನಾರಾಯಣ ಅಲ್ಲ, ಅವನೊಬ್ಬ ಅಸ್ವಸ್ಥ ನಾರಾಯಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ರಸ್ತೆ, ನೀರು ರೈತರ ಬಗ್ಗೆ ಮಾತನಾಡುತ್ತಿಲ್ಲ. ಲವ್ ಜಿಹಾದ್ ಬಗ್ಗೆ ಮಾತನಾಡು ಎಂದು ಕಟೀಲ್ ಹೇಳ್ತಾನೆ. ಅಮಿತಾ ಶಾ ಅಂತಾ ರಾಜ್ಯಕ್ಕೆ ಬಂದು ಟಿಪ್ಪು ಸುಲ್ತಾನ್ ವರ್ಸಸ್ ಅಬ್ಬಕ್ಕ ಅಂತ ಹೇಳುತ್ತಾನೆ.
ಜನರು ಸಾಮರಸ್ಯದಿಂದ ಇರಬೇಕಾಗಿರುವುದು ಬಿಜೆಪಿಗೆ ಬೇಕಾಗಿಲ್ಲ. ಜನರು ಬಡೆದಾಡುಕೊಂಡು ಇರಬೇಕು. ಒಡೆದಾಳುವ ನೀತಿ ಇರುವುದು ಬಿಜೆಪಿಯಲ್ಲಿದೆ. ಬಿಜೆಪಿಯವರು ಸಮಾಜ ಸೇವೆ ಮರೆತಿದ್ದಾರೆ. ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ ಎಂದರು.
ರಾಜ್ಯವನ್ನು ಹಾದಿ ತಪ್ಪಿ ಸುತ್ತಿರುವ ಕೋಮುವಾದಿ ಬಿಜೆಪಿ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಿ. ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಬಿಜೆಪಿ, ಜೆಡಿಎಸ್ ನ ಹಲವರು ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಬಗ್ಗೆ ಜನತೆಗೆ ಭ್ರಮ ನಿರಸನವಾಗಿದೆ. ಕೋಮುವಾದಿ ಬಿಜೆಪಿ ದೂರವಿಡಲು ಕಳೆದ ಬಾರಿ ನಾವು 80 ಸ್ಥಾನ ಪಡೆದಿದ್ದರೂ 37 ಸ್ಥಾನ ಪಡೆದಿದ್ದ ಜೆಡಿಎಸ್ ಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದೇವು. ಆದರೆ, ಜೆಡಿಎಸ್ ಕೂಡ ಹೇಳಿ ಕೊಳ್ಳುವಂತ ಕೆಲಸ ಮಾಡಲಿಲ್ಲ. ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ದ್ವೇಷದ ರಾಜಕಾರಣ, ಸಾಮರಸ್ಯವನ್ನು ಹಾಳು ಮಾಡುತ್ತಿದೆ ಎಂದು ಕಿಡಿಕಾರಿದರು.
ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಬರುತ್ತದೆ. ಜನರು ಈ ಬಾರಿ ಸಾಕಷ್ಟು ಪ್ರೀತಿ ಕಾಂಗ್ರೆಸ್ ನ ಮೇಲೆ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಪರವಾದ ಅಲೆಯಿದೆ. ಈ ಬಾರಿ ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.