ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ: ಸಿ.ಟಿ.ರವಿ | JANATA NEWS

ಉತ್ತರಕನ್ನಡ : ಸಿ ಟಿ ರವಿ ಸಿಎಂ ಬೊಮ್ಮಾಯಿಯ ನಾಯಕತ್ವದಲ್ಲೇ ಚುನಾವಣೆಯನ್ನು ಎದುರಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷದವರು ಗೊಂದಲ ಹುಟ್ಟು ಹಾಕುವ ಷಡ್ಯಂತ್ರ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು DNA ಮೂಲಕ ನಾಯಕತ್ವ ಬರುತ್ತೆ ಎಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದಿರಾಗಾಂಧಿ ತರಹನೇ ಸೀರೆ ಉಡಬೇಕು. ಇಂದಿರಾಗಾಂಧಿ ನಕ್ಕಾಗ ಹೇಗೆ ಕೆನ್ನೆಗೆ ಗುಳಿ ಬೀಳುತ್ತೋ ಅದೇ ರೀತಿ ಪ್ರಿಯಾಂಕ ಗಾಂಧಿ ನಗಬೇಕು. ನಾಯಕತ್ವ ಜನರ ನಡುವೆ ಎದ್ದು ಬರಬೇಕು. ಕಾಂಗ್ರೆಸ್‌ನದು ಕೌಟುಂಬಿಕ ವಾರಸುದಾರಿಕೆ ಎನ್ನಬೇಕು ಎಂದು ಗಾಂಧಿ ಕುಟುಂಬದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಜನರ ನಡುವಿನಿಂದ ಲೀಡರ್ ಶಿಪ್‌ನಿಂದ ಬರೋದು, ಕೌಟುಂಬಿಕ ವಾರಿಸ್ಥಾರಿಕೆಯಿಂದಲ್ಲ. ಸುರ್ಜೇವಾಲರದ್ದು ಮಾನಸಿಕ ಗುಲಾಮಗಿರಿಯಾಗಿದ್ದು, ಇದರಿಂದ ಅವರು ಲೀಡರ್‌ಶಿಪ್ ಅಂತಿದ್ದಾರೆ. ಅವರು ಅಪ್ಪನಿಂದ ಮಗನಿಗೆ, ಮಗಳಿಗೆ ಬರೋದು ಅಂದ್ಕೊಂಡಿದ್ದು, ಅದು ಹಾಗಲ್ಲ. ಜನರ ನಡುವಿನಿಂದ ಬರುವಂತಹ ನಾಯಕತ್ವ ಬಿಜೆಪಿಯಲ್ಲಿ ಊರೂರಿನಲ್ಲೂ ಇದೆ ಎಂದು ಹೇಳಿದರು.