ಡಿ.ರೂಪಾ ಕೇಳಿರುವ ಪ್ರಶ್ನೆಗಳು ನೈತಿಕವಾಗಿವೆ, ಸಂಬಂಧಪಟ್ಟವರು ಉತ್ತರ ನೀಡಲಿ: ಪ್ರತಾಪ್ ಸಿಂಹ | JANATA NEWS

ಮೈಸೂರು : ಐಪಿಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಜಿಪಿ ಡಿ.ರೂಪ ಅವರು ಕೇಳಿರುವ ಪ್ರಶ್ನೆಗಳು ನೈತಿಕವಾಗಿವೆ. ಇದಕ್ಕೆ ರೋಹಿಣಿ ಸಿಂಧೂರಿ ಮತ್ತು ಸಂಬಂಧಪಟ್ಟವರು ಉತ್ತರ ಕೊಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದರು.
ಐಪಿಎಸ್ ಅಧಿಕಾರಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜಟಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ಡಿ. ರೂಪಾ ಎತ್ತಿರುವ ಪ್ರಶ್ನೆಗಳು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿವೆ.
ಹೀಗಾಗಿ ಆರೋಪಗಳಿಗೆ ಸಂಬಂಧಿಸಿದಂತೆ ವಾಸ್ತವ ಏನು ನಡೆದಿದೆ ಎಂಬುದರ ಬಗ್ಗೆ ಪತ್ರಕರ್ತರು ಸತ್ಯಶೋಧನೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಐಎಎಸ್, ಐಪಿಎಸ್ ಅಧಿಕಾರಗಳ ಮೇಲೆ ರಾಜ್ಯ ಸರ್ಕಾರಕ್ಕೆ ನಿಯಂತ್ರಣ ಇಲ್ಲ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಹೇಳಿಕೆ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ಹಾಸನದಲ್ಲಿ ಮಹಾಮಸ್ತಕಾಭಿಷೇಕ ಆದಾಗ ಯಾರ ಸರ್ಕಾರವಿತ್ತು? ರೋಹಿಣಿ ಸಿಂಧೂರಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎ.ಮಂಜು ಅವರೊಂದಿಗೆ ಬೀದಿ ರಂಪ ಆಗಿತ್ತು.
ಮೈಸೂರಿನ ರಶ್ಮಿ ಮಹೇಶ್ ಮೇಲೆ ಹಲ್ಲೆ ಮಾಡಿದಾಗ, ಜಿಲ್ಲಾಧಿಕಾರಿ ಶಿಖಾ ಅವರನ್ನು ನಿಂದಿಸಿದಾಗ, ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ರಾಜ್ಯದಲ್ಲಿ ಅಧಿಕಾರಿಗಳ ಸ್ಥಿತಿ ಏನಾಗಿತ್ತು? ರೋಹಿಣಿ ಸಿಂಧೂರಿ ಅವರನ್ನು ತಲೆ ಮೇಲೆ ಕೂರಿಸಿಕೊಂಡವರು ಯಾರು? ರೂಪ ಎತ್ತಿರುವ ನೈತಿಕ, ಕಾನೂನಾತ್ಮಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಪತ್ರಕರ್ತರು ಸತ್ಯಶೋಧ ಮಾಡಬೇಕು ಎಂದು ಹೇಳಿದರು.
ಅಧಿಕಾರಿಗಳ ಬಗ್ಗೆ ಹೇಳುವ ಕಾಂಗ್ರೆಸ್ಸಿಗರು ಮೈಸೂರಿನ ಎಟಿಐನಲ್ಲಿ ರಶ್ಮಿ ಮಹೇಶ್ ಮೇಲೆ ಆಕ್ರಮಣವಾಗಿತ್ತು. ಅವತ್ತು ಅಧಿಕಾರಿಗಳ ಪರಿಸ್ಥಿತಿ ಏನಾಗಿತ್ತು? ಐಎಎಸ್ ಸಿ.ಶಿಖಾ ಅವರ ಮೇಲೆ ಕೆ.ಮರೀಗೌಡ ಅವಾಚ್ಯ ಶಬ್ದ ಬಳಸಿದಾಗ ಸಿದ್ದರಾಮಯ್ಯ ಸರ್ಕಾರ ಏನು ಮಾಡಿತ್ತು? ಮಲ್ಲಿಕಾರ್ಜುನ ಬಂಡೆಯನ್ನು ಡ್ರಾಗಾರ್ನಲ್ಲಿ ಕೊಂದಿದ್ದಾಗ ಯಾವ ಸರ್ಕಾರವಿತ್ತು? ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆಯಾದಾಗ ಅಧಿಕಾರಿಗಳ ಸ್ಥಿತಿ ಏನಾಗಿತ್ತು? ಎಂದು ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಅವರಿಗೆ ಮರು ಪ್ರಶ್ನೆ ಹಾಕಿದ್ದಾರೆ.