ಬಿಬಿಎಂಪಿ ಯ ಬೆಂಗಳೂರು ನಗರದ ಅಭಿವೃದ್ಧಿ ಕಾರ್ಯಕ್ರಮದ ಕುರಿತಾಗಿ ಹೊಸ ವಿಡಿಯೊ ಬಿಡುಗಡೆ | JANATA NEWS

ಬೆಂಗಳೂರು : ಬ್ರಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ಅಭಿವೃದ್ಧಿ ಕಾರ್ಯಕ್ರಮದ ಕುರಿತಾಗಿ ಹೊಸ ವಿಡಿಯೊ ಒಂದನ್ನು ಹಂಚಿಕೊಂಡಿದೆ.
ಈ ವಿಡಿಯೊದಲ್ಲಿ ನಗರದ ರಾಜಾಕಾಲುವೆ ತಡೆಗೊಡೆ ನಿರ್ಮಾಣ, ಅತಿಯಾದ ಮಳೆನೀರು ಸಮರ್ಪಕವಾದ ನಿರ್ವಹಣೆ ಹಾಗೂ ಕಸ ಸಂಗ್ರಹಣೆ/ನಿರ್ವಹಣೆ, ವೈಟ್ತೊಪಿಂಗ್, ಪಾದಾಚಾರಿ ಮಾರ್ಗ ಅಬಿವ್ರದ್ಧಿ ಸೇರಿದಂತೆ ಬಿಬಿಎಂಪಿ ಕೈಗೊಂಡ ಹಲವು ಕಾರ್ಯಗಳ ಮಾಹಿತಿ ನೀಡಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಮಾತನಾಡಿ,"ಸುಮಾರು ಫ್ಲೈ ಓವರ್, ಅಂಡರ್ ಪಾಸ್ ಮತ್ತು ರಸ್ತೆಯ ಅಗಲೀಕರಣ ಮಾಡಿ ನಾವು ದಿನನಿತ್ಯ ಸಂಚಾರ ವ್ಯವಸ್ಥೆಯನ್ನು ಸುಗಮವಾಗಿ ಹೇಗೆ ನಡೆಸಬೇಕು ಅದಕ್ಕಾಗಿ ಕ್ರಿಯಾರತರಾಗುತ್ತಿದ್ದೇವೆ. ಟ್ರಾಫ಼್ಿಕ್ ಪೋಲಿಸರೊಂದಿಗೆ ಸಮನ್ವಯ ಸಾಧಿಸಿ ಸುಮಾರು ಜಂಕ್ಷನ್ ಗಳ ಅಭಿವ್ರುದ್ಧಿ ಕಾರ್ಯಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ. ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಕೊಳ್ಳಬೇಕು, ಆ ನಿಟ್ಟಿನಲ್ಲಿ ನಾವು ಹೆಚ್ಚೆಚ್ಚು
ಸಂಸ್ಕರಣಾ ಯೋಜನೆಯನ್ನು ತೆಗೆದುಕೊಳ್ಳುತ್ತಿದ್ದೇವೆ", ಎಂದಿದ್ದಾರೆ.