ಯಡಿಯೂರಪ್ಪ ನನ್ನನ್ನು ಕೇಂದ್ರ ಮಂತ್ರಿ ಮಾಡಿದ್ರು: ಕೊಂಡಾಡಿದ ಯತ್ನಾಳ್ | JANATA NEWS

ಬೆಂಗಳೂರು : ಯಡಿಯೂರಪ್ಪ ನನ್ನನ್ನು ಕೇಂದ್ರ ಮಂತ್ರಿ ಮಾಡಿದ್ರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಂಡಾಡಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರ ಕೊನೆ ಅಧಿವೇಶನವಾಗಿದ್ದರಿಂದ ವಿಧಾನಸಭೆಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಪಕ್ಷ ಕಟ್ಟಿ ಕೊನೆವರೆಗೂ ಉಳಿದವರು ಯಡಿಯೂರಪ್ಪ. ಈಗ ನಿಲ್ಲಲ್ಲ ಮಗನನ್ನ ರೆಡಿ ಮಾಡಿದ್ದೇನೆ ಅಂತ ಹೇಳಿದ್ದಾರೆ. ಅನೇಕರು ತಮ್ಮ ಸ್ಥಾನವನ್ನು ಮಕ್ಕಳಿಗೆ ಬಿಟ್ಟುಕೊಡೋಣ ಅಂತಿದ್ದರೆ, ಇನ್ನೂ ಕೆಲವರು ಸಾಯೋವರೆಗೂ ಶಾಸಕನಾಗೇ ಉಳಿಯಬೇಕು ಅಂತಿದ್ದಾರೆ ಎಂದರು.
ಯಡಿಯೂರಪ್ಪ ಅವರು ನನ್ನನ್ನೂ ಮಂತ್ರಿ ಮಾಡಲಿಲ್ಲ, ನಿಮ್ಮನ್ನೂ ಮಂತ್ರಿ ಮಾಡಲಿಲ್ಲ ಎಂದು ಯತ್ನಾಳ್ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಲೆಳೆದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ಚೇ.. ಚೇ.. ಚೇ.. ಯಡಿಯೂರಪ್ಪನವರು ನನ್ನ ಶಿಕ್ಷಣ ಸಚಿವರನ್ನಾಗಿ ಮಾಡಿದ್ರು, ನಿಮ್ಮನ್ನು ಕೇಂದ್ರ ಮಂತ್ರಿ ಮಾಡಿದರು ಎಂದರು. ಈ ವೇಳೆ ನಾನು ಮುಖ್ಯಮಂತ್ರಿ ಆಗ್ತೀನಿ ಅಂತ ಸಚಿವರು ಮಾಡಲಿಲ್ಲ, ಅದೇನೆ ಇರಲಿ ಅವರು ನನ್ನನ್ನು ಬೆಳೆಸಿದರು. ಪಕ್ಷವನ್ನು ಕಟ್ಟಿದ ಶ್ರಮ ಯಡಿಯೂರಪ್ಪ ಅವರದ್ದು, ಪಕ್ಷ ಇಂದು ಈ ಸ್ಥಾನದಲ್ಲಿ ಇರಲು ಅವರೇ ಕಾರಣ ಎಂದು ಯತ್ನಾಳ್ ಬಿಎಸ್‌ವೈ ಅವರನ್ನು ಶ್ಲಾಘಿಸಿದರು.
ಯಡಿಯೂರಪ್ಪ ಅವರು ನಮ್ಮ ನಾಯಕರು, ನಮ್ಮ ನಡುವೆ ಏನೇ ವೈಷಮ್ಯ ಇರಬಹುದು. ರಾಜ್ಯದಲ್ಲಿ ಪಕ್ಷ ಕಟ್ಟಿದ್ದು ಯಡಿಯೂರಪ್ಪ, ಅನಂತ್ ಕುಮಾರ್ ಅವರು. ಉತ್ತರ ಕರ್ನಾಟಕದ ಭಾಗಕ್ಕೆ ನಾನು ಕೇಂದ್ರದಲ್ಲಿ ಮಂತ್ರಿ ಆಗುವ ಅವಕಾಶ ಸಿಕ್ಕಿತ್ತು. ಎಲ್ಲರೂ ಆಗ ಹೇ ಕೆಲಸ ಮಾಡಿಕೊಡಪ್ಪ ಅಂತಿದ್ರು. ಈಗ ಆರ್ ಅಶೋಕ್ ಅವರು, ಮುನಿರತ್ನ, ಸುಧಾಕರ್, ಸಿ.ಸಿ ಪಾಟೀಲ್, ಗೃಹ ಮಂತ್ರಿಗಳು ಸಹಕಾರ ನೀಡಿದ್ರು. ಮುಂದಿನ ದಿನಗಳಲ್ಲಿ ಯಾರು ಆ ಕಡೆಯವರು ಈ ಕಡೆ ಬರ್ತಾರೆ, ಈ ಕಡೆಯವರು ಆ ಕಡೆ ಹೋಗ್ತಾರೆ ಗೊತ್ತಿಲ್ಲ ಎಂದರು.