Fri,Mar31,2023
ಕನ್ನಡ / English

ನಾನು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಕಾರಣ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರಣ, ದೇವೇಗೌಡರು ನಮಗೆ ಆದರ್ಶ: ಬಿಎಸ್ ವೈ | JANATA NEWS

24 Feb 2023
597

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟುವಾಗ ನಾನು ಒಬ್ಬನೇ ಇದ್ದೆ. ನನ್ನ ರಾಜಕೀಯ ಜೀವನದಲ್ಲಿ ನಾಡಿನ ಜ್ವಲಂತ ಸಮಸ್ಯೆಗಳಿಗೆ ಬಗ್ಗೆ ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದೇನೆ. ನಾನಿಂದು ಇಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರೆ ಅದಕ್ಕೆ ಆರ್​ಎಸ್​ಎಸ್​ ಕಾರಣ ಎಂದರು.

ನಾನು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಕಾರಣ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರಣ. ನನಗೆ ಅನೇಕ ಅವಕಾಶಗಳನ್ನು ಆರ್‌ಎಸ್‌ಎಸ್‌ ನೀಡಿದೆ ಎಂದ ಅವರು, ನಮಗೆಲ್ಲರಿಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಆದರ್ಶ. ಈ ವಯಸ್ಸಲ್ಲೂ ಕೂಡ ಅವರು ನಮ್ಮ ರಾಜ್ಯದ ನೆಲ, ಜಲ, ಭಾಷೆ ಬಗ್ಗೆ ಚಿಂತನೆ ಮಾಡುತ್ತಾರೆ. ಅವರಿಂದ ಕಲಿಯುವುದು ನಮಗೆ ಬಹಳಷ್ಟಿದೆ ಎಂದು ಬಿಎಸ್‌ ಯಡಿಯೂರಪ್ಪ ಹೇಳಿದರು.

ಪ್ರಸ್ತುತ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಂದಿನ ಅಧಿವೇಶನದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಬೇಕು. ಈ ಸದನಕ್ಕೆ ಮಹಿಳೆಯರು ಹೆಚ್ಚು ಆಯ್ಕೆಯಾಗಿ ಬರಬೇಕು ಎಂದರು.

ಯಾರೂ ಇರಲಿಲ್ಲ, ಶಾಸನ ಸಭೆಯಲ್ಲಿ ನಾವು ಇಬ್ಬರೇ ಇದ್ದೆವು. ಅಂದು ಯಾರೂ ಇರಲಿಲ್ಲ ನಮ್ಮ ಜೊತೆ, ವಸಂತ ಬಂಗೇರ ವರು ನಮ್ಮನ್ನು ಕೈಬಿಟ್ಟು ಹೋದರು. ಎಂದೂ ನಾನು ವಾಪಸ್ ತಿರುಗಿ ನೋಡಲಿಲ್ಲ, ನಾಡಿನ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ” ಎಂದರು.

”ನನಗೆ ಅತ್ಯಂತ ತೃಪ್ತಿ ತಂದದ್ದು, ಬಗರ್ ಹುಕುಂ ಸಾಗುವಳಿ ಮಾಡಿದ ರೈತರಿಗೆ ನ್ಯಾಯ ಸಿಗದಿದ್ದಾಗ ವಿಧಾನಸೌಧದಲ್ಲಿ ಧರಣಿ ಕುಳಿತೆ, ಕೊನೆಗೆ ಅಂದಿನ ಸಿಎಂ ಆಗಿದ್ದ ಎಸ್.ಎಂ .ಕೃಷ್ಣ ಅವರು ಅದಕ್ಕೊಂದು ಪರಿಹಾರ ನೀಡಿದರು” ಎಂದು ನೆನಪಿಸಿಕೊಂಡರು.

”ನಾನು ಇಷ್ಟು ಎತ್ತರಕ್ಕೆ ಏರಬೇಕಾದರೆ, ನಿಲ್ಲಬೇಕಾದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಕಾರಣ. ಅಲ್ಲಿ ಸಿಕ್ಕ ತರಬೇತಿ , ಅವಕಾಶ, ಮಾರ್ಗದರ್ಶನ ನಾನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ”ಎಂದರು.

ನಾನು ಶಿಕಾರಿಪುರದ ಜನತೆಗೆ ಚಿರಋಣಿ, ಬದುಕಿನ ಕೊನೆಯುಸಿರು ಇರುವ ವರೆಗೆ ಅವರ ಸೇವೆ ಪ್ರಾಮಾಣಿಕವಾಗಿ ಮಾಡುತ್ತೇನೆ. ಬರುವಂತಹ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೆ ಓಡಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು. ಯಾರೂ ವಿಚಲಿತರಾಗುವ ಅಗತ್ಯವಿಲ್ಲ. ಒಂದು ದಿನವೂ ನನ್ನ ಸ್ವಂತಕ್ಕೆ ಬಳಸಿಕೊಳ್ಳುವುದಿಲ್ಲ ಎಂದರು.

RELATED TOPICS:
English summary :Rashtriya Swayamsevak Sangh is the reason why I grew so tall, Deve Gowda is our role model: BSY

ಸಿದ್ದರಾಮಯ್ಯ ಕುರಿತು ಸಿನಿಮಾ, ಪೋಸ್ಟರ್ ಔಟ್
ಸಿದ್ದರಾಮಯ್ಯ ಕುರಿತು ಸಿನಿಮಾ, ಪೋಸ್ಟರ್ ಔಟ್
ಮಚ್ಚು ಹಿಡಿದು ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ
ಮಚ್ಚು ಹಿಡಿದು ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ
ರಸ್ತೆ ದಾಟುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವು
ರಸ್ತೆ ದಾಟುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವು
ವರುಣಾದಲ್ಲೂ ಸಿದ್ದರಾಮಯ್ಯ ಗೆಲುವು ಅಷ್ಟು ಸುಲಭವಲ್ಲ : ಬಿ.ಎಸ್.ಯಡಿಯೂರಪ್ಪ
ವರುಣಾದಲ್ಲೂ ಸಿದ್ದರಾಮಯ್ಯ ಗೆಲುವು ಅಷ್ಟು ಸುಲಭವಲ್ಲ : ಬಿ.ಎಸ್.ಯಡಿಯೂರಪ್ಪ
ನಂದಿನಿ ಮೊಸರು ಪಾಕೆಟ್ ಮೇಲೆ ದಹಿ ಪದ: ಇದು ಕನ್ನಡಿಗರ ಮೇಲೆ ಬಿಜೆಪಿಯ ದಮ್ಮು ತಾಕತ್ತಿನ ಪ್ರದರ್ಶನವೇ?
ನಂದಿನಿ ಮೊಸರು ಪಾಕೆಟ್ ಮೇಲೆ ದಹಿ ಪದ: ಇದು ಕನ್ನಡಿಗರ ಮೇಲೆ ಬಿಜೆಪಿಯ ದಮ್ಮು ತಾಕತ್ತಿನ ಪ್ರದರ್ಶನವೇ?
ದೈವನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕ‌ ಸಾವು
ದೈವನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕ‌ ಸಾವು
ಮುಸ್ಲಿಂ ಸಮುದಾಯಕ್ಕೆ ನಾವು ಅನ್ಯಾಯ ಮಾಡಿಲ್ಲ: ಬಿಎಸ್​ ಯಡಿಯೂರಪ್ಪ
ಮುಸ್ಲಿಂ ಸಮುದಾಯಕ್ಕೆ ನಾವು ಅನ್ಯಾಯ ಮಾಡಿಲ್ಲ: ಬಿಎಸ್​ ಯಡಿಯೂರಪ್ಪ
ಮಧ್ಯಾಹ್ನದ ಬಿಸಿ ಊಟ ಸೇವಿಸಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥ
ಮಧ್ಯಾಹ್ನದ ಬಿಸಿ ಊಟ ಸೇವಿಸಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥ
ನವಜಾತ ಶಿಶುವನ್ನು ದೇವಾಲಯದ ‌ಬಳಿ ಬಿಟ್ಟು ಹೋದ ಪಾಪಿಗಳು!
ನವಜಾತ ಶಿಶುವನ್ನು ದೇವಾಲಯದ ‌ಬಳಿ ಬಿಟ್ಟು ಹೋದ ಪಾಪಿಗಳು!
ಕಳೆದ ಬಾರಿಯಂತೆ ಈ ಬಾರಿಯೂ ಜೆಡಿಎಸ್​-ಬಿಜೆಪಿ ಮ್ಯಾಚ್​ ಫಿಕ್ಸಿಂಗ್
ಕಳೆದ ಬಾರಿಯಂತೆ ಈ ಬಾರಿಯೂ ಜೆಡಿಎಸ್​-ಬಿಜೆಪಿ ಮ್ಯಾಚ್​ ಫಿಕ್ಸಿಂಗ್
ಮೇ 10 ಮತದಾನದ ದಿನ ಅಲ್ಲ, ಭ್ರಷ್ಟಾಚಾರ ತೆಗೆದುಹಾಕುವ ದಿನ: ಡಿ ಕೆ ಶಿವಕುಮಾರ್​
ಮೇ 10 ಮತದಾನದ ದಿನ ಅಲ್ಲ, ಭ್ರಷ್ಟಾಚಾರ ತೆಗೆದುಹಾಕುವ ದಿನ: ಡಿ ಕೆ ಶಿವಕುಮಾರ್​
ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಉಲ್ಲಂಘನೆ!
ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಉಲ್ಲಂಘನೆ!

ನ್ಯೂಸ್ MORE NEWS...