ಬಿಜೆಪಿ ಹಿರಿತಯರಿಗೆ ಟಿಕೆಟ್ ಇಲ್ಲ ಅನ್ನೋದು ಊಹಾಪೋಹವಾಗಿದೆ, ಗುರಾತ್ ಮಾದರಿಯಲ್ಲಿ ಎಲ್ಲಿದೆ? | JANATA NEWS

ಕೊಪ್ಪಳ : ಬಿಜೆಪಿ ಹಿರಿತಯರಿಗೆ ಟಿಕೆಟ್ ಇಲ್ಲ ಅನ್ನೋದು ಊಹಾಪೋಹವಾಗಿದೆ, ಗುರಾತ್ ಮಾದರಿಯಲ್ಲಿ ಎಲ್ಲಿದೆ, ಯಾರು ಹೇಳಿದ್ದಾರೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಮಾಜಿ ಶಾಸಕ ಶಿವಶರಣಪ್ಪಗೌಡರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಿಜೆಪಿಯಲ್ಲಿ ಹಿರಿಯರಿಗೆ ಟಿಕೆಟ್ ಇಲ್ಲ ಎನ್ನುವ ವಿಚಾರ ಬರಿ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಪಕ್ಷದಲ್ಲಿ ಅಂಥ ಚರ್ಚೆ ನಡೆದಿಲ್ಲ. ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಅಮಿತಾ ಶಾ ರಾಜ್ಯಕ್ಕೆ ಬರುವುದರಿಂದ ರಾಜ್ಯ ಅಭಿವೃದ್ದಿಯಾಗಲಿದೆ. ಕಾಂಗ್ರೆಸ್ ಗೆ ಟೀಕಿಸುವ ವಿಷಯವಿಲ್ಲದೆ ಈ ರೀತಿ ಟೀಕಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗಾವಿ ಹಾಗು ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಎರಡು ಕಡೆ ಅಭಿವೃದ್ದಿ ಕಾರ್ಯ ಹಾಗೂ ರೋಡ್ ಶೋ ಮಾಡಲಿದ್ದಾರೆ.ನರೇಂದ್ರ ಮೋದಿ ವಿಶ್ವ ನಾಯಕರು. ವಿಶ್ವದಲ್ಲಿ ಆರ್ಥಿಕತೆಯಲ್ಲಿ ದೇಶವನ್ನು ಮುನ್ನಡಿಸುತ್ತಿದ್ದಾರೆ. ಮೋದಿ ಬರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿಯಾಗಲಿದೆ. ಅಭಿವೃದ್ದಿಗಾಗಿ ಅವರು ಮೇಲಿಂದ ಮೇಲೆ ಬಂದರೆ ತಪ್ಪೇನು ಎಂದರು.
ಕಾಂಗ್ರೆಸ್ ಸೋಲಿನ ಹತಾಸೆಯಿಂದ ಮಾತನಾಡುತ್ತಿದ್ದಾರೆ. ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಚುನಾವಣೆಗೆ ಬಂದಿಲ್ಲವೇ ? ಮೋದಿ ಬರುವುದರಿಂದ ರಾಜ್ಯ ಬಿಜೆಪಿಗೆ ಒಳ್ಳೆಯದಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಮುಖಂಡರು ಸಹ ಸಮರ್ಥರಿದ್ದಾರೆ ಎಂದರು.
ಈ ಬಾರಿ ವಿಧಾನಸಭೆ ಚುನಾವಣೆಗೆ ನಾನು ಸ್ಪರ್ಧೇ ಮಾಡುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಹಿರಿತಯರಿಗೆ ಟಿಕೆಟ್ ಇಲ್ಲ ಅನ್ನೋದು ಊಹಾಪೋಹವಾಗಿದೆ. ಗುರಾತ್ ಮಾದರಿಯಲ್ಲಿ ಎಲ್ಲಿದೆ, ಯಾರು ಹೇಳಿದ್ದಾರೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿಯೂ ಲಿಂಗಾಯುತ ಸಮುದಾಯಕ್ಕೆ ಬಿಜೆಪಿ ಬೆಂಬಲಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.