ಬಾಯ್ಲರ್ ಸ್ಫೋಟ: ಮೂವರು ಕಾರ್ಮಿಕರಿಗೆ ಗಂಭೀರ ಗಾಯ! | JANATA NEWS

ಬೆಂಗಳೂರು : ಬಾಯ್ಲರ್ ಸಿಡಿದು ಮೂವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರೋ ಘಟನೆ ಬೊಮ್ಮಸಂದ್ರದ ಬಾಲ್ ಫಾರ್ಮಾ ಕಂಪನಿಯಲ್ಲಿ ನಡೆದಿದೆ.
ಸ್ಪೋಟದಿಂದ ಕೆಮಿಕಲ್ ಸಿಡಿದು ಮೂವರು ಕಾರ್ಮಿಕರು ಪ್ರದೀಪ್, ಮುರುಗನ್, ಕಿರಣ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆನೇಕಲ್ ತಾಲೂಕಿನ ಬೊಮ್ಮಸಂದ್ರದ ಬಾಲ್ ಫಾರ್ಮಾ ಕಂಪನಿಯಲ್ಲಿ ತಾಂತ್ರಿಕ ದೋಷದಿಂದ ಏಕಾಏಕಿ ಬಾಯ್ಲರ್ ಸ್ಫೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಬಾಯ್ಲರ್ ಛಿದ್ರವಾಗಿ ಹೋಗಿದ್ದು, ಮೂವರ ಮೇಲೆ ಕೆಮಿಕಲ್ ಬಿದ್ದಿದ್ದು, ಕೆಲ ಅಡಿ ದೂರದಲ್ಲಿ ಹಾರಿ ಬಿದ್ದಿದ್ದಾರೆ.
ಸ್ಥಳಕ್ಕೆ ರಕ್ಷಣ ಸಿಬ್ಬಂದ ಹಾಗೂ ಪೊಳೀಸರು ಆಗಮಿಸಿದ್ದು ತನಿಖೆ ನಡೆಸಿದ್ದಾರೆ. ಬಾಯ್ಲರ್ ಸ್ಪೋಟಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.