ಪತ್ನಿ, ಇಬ್ಬರು ಮಕ್ಕಳಿಗೆ ವಿಷವುಣಿಸಿ ಪತಿ ತಾನೂ ಆತ್ಮಹತ್ಯೆಗೆ ಯತ್ನ: ಹೆಂಡತಿ, ಇಬ್ಬರು ಮಕ್ಕಳ ಸಾವು | JANATA NEWS

ಬೆಂಗಳೂರು : ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ.
ಕೋಣನಕುಂಟೆಯಲ್ಲಿ ವಾಸವಾಗಿದ್ದ ನಾಗೇಂದ್ರ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ನಾಗೇಂದ್ರ, ತನ್ನ ಪತ್ನಿ ವಿಜಯ(28) ಮತ್ತು ಮಕ್ಕಳಾದ ನಿಷಾ(7) ಹಾಗೂ ದೀಕ್ಷಾ(5) ಅವರನ್ನು ಕೊಂದು ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ನಾಗೇಂದ್ರ ಊಟದಲ್ಲಿ ತಿಗಣಿ ಔಷಧಿ, ಇಲಿ ಔಷಧ ಬೇರಿಸಿ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ತಿನಿಸಿದ್ದಾನೆ. ಬಳಿಕ ತಾನೂ ಅದನ್ನು ಸೇವಿಸಿದ್ದಾನೆ. ಅಷ್ಟೊತ್ತಿಗಾಗಲೇ ಹೆಂಡ್ತಿ ಸಹೋದರ ಬಂದು ಅವರನ್ನು ರಕ್ಷಣೆ ಮಾಡಿದ್ದಾರೆ.
ಹಲವು ವರ್ಷಗಳ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ನಾಗೇಂದ್ರ ಕುಡಿತದ ದಾಸನಾಗಿದ್ದ. ವಿಜಯಲಕ್ಷ್ಮೀ ಕೆಲಸಕ್ಕೆ ಹೋಗಿ ಗಂಡ ಹಾಗೂ ಮಕ್ಕಳನ್ನ ಸಾಕುತ್ತಿದ್ದರು. ಆದರೆ, ಆತ ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ನಿನ್ನೆ ಸಹ ದಂಪತಿ ಜಗಳವಾಡಿಕೊಂಡಿದ್ದರು. ಈ ಮಧ್ಯೆ ಊಟದಲ್ಲಿ ಹೆಂಡ್ತಿ ಮಕ್ಕಳಿಗೆ ವಿಷ ಬೆರಸಿ ಸೇವಿಸುವಂತೆ ಮಾಡಿದ್ದಾನೆ. ಊಟದ ನಂತರ ತೀವ್ರ ಅಸ್ವಸ್ಥರಾಗಿ ಬಳಲಿ ಮೂವರು ಸಾವನ್ನಪ್ಪಿದ್ದಾರೆ.
ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.