ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ಅರಸರು ಹೇಳಿಕೆಗೆ ಸಿಟಿ ರವಿ ತಿರುಗೇಟು | JANATA NEWS

ಬೆಳಗಾವಿ : ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ಅರಸರು ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಹೇಳಿಕೆಗೆ ಬಿಜೆಪಿ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಸುಳ್ಳು ಮತ್ತು ಕಾಂಗ್ರೆಸ್ ಒಂದು ನಾಣ್ಯದ 2 ಮುಖಗಳು. ಸುಳ್ಳನ್ನು ಸತ್ಯದ ರೀತಿಯಲ್ಲಿ ಹೇಳುವುದು ಅವರಿಗಿರುವ ಕಾಯಿಲೆ ಎಂದು ವಾಗ್ದಾಳಿ ಮಾಡಿದರು.
ಭಾರತ ಹೆಸರು ಕೊಟ್ಟಿದ್ದು ಮುಸ್ಲಿಂರು ಅಂತ ಹೇಳಿದರು ಅಚ್ಚರಿ ಇಲ್ಲ. ಮುಸ್ಲಿಂರು ನಾಮಕರಣ ಮಾಡಿದ್ದಾರೆಂದು ಹೇಳಿದರೂ ಅಚ್ಚರಿ ಇಲ್ಲ. ಕೇವಲ ಕೃಷ್ಣ ಮಠ ಅಲ್ಲ, 'ಭಾರತ' ಹೆಸರು ಕೊಟ್ಟಿದ್ದು ಮುಸಲ್ಮಾನರು. ಮುಸಲ್ಮಾನ ದೊರೆಗಳೇ ರಾಮಮಂದಿರ ನಿರ್ಮಾಣ ಮಾಡಿದ್ದು. ಮುಸಲ್ಮಾನ ದೊರೆಗಳೇ ಕಾಶಿ ವಿಶ್ವನಾಥನ ಪ್ರತಿಷ್ಠಾಪನೆ ಮಾಡಿದ್ದು. ಕಾಂಗ್ರೆಸ್ನವರು ಹೀಗೆ ಹೇಳಿದರೂ ನಾವೆಲ್ಲಾ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದರು.
ಬಿಜೆಪಿ ಅಂಬೇಡ್ಕರ್ ವಿರೋಧಿ ಅಂತಾ ಹೇಳ್ತಾರೆ. ಆದ್ರೆ ಅಂಬೇಡ್ಕರ್‌ಗೆ ನಿಜವಾಗಿಯೂ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದ್ದಾರೆ. ಅಂಬೇಡ್ಕರ್ ಅವರು ಬದುಕಿದ್ದಾಗಲು, ಸತ್ತ ಮೇಲೆಯೂ ಅಪಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಮರಣ ಹೊಂದಿದಾಗ ಅವರಿಗೆ 6*3 ಅಡಿ ಜಾಗವನ್ನೂ ಕಾಂಗ್ರೆಸ್ ಕೊಟ್ಟಿಲ್ಲ ಎಂದು ಎಂದಿದ್ದಾರೆ.