ವಿವಾಹವಾದ ಮರುದಿನವೇ ಬೆಂಗ್ಳೂರು ಟ್ರಾಫಿಕ್ನಲ್ಲಿ ಪತ್ನಿ ಬಿಟ್ಟು ಪತಿ ಎಸ್ಕೇಪ್! | JANATA NEWS

ಬೆಂಗಳೂರು : ನವವಿವಾಹಿತ ಮಹಾನಗರಿಯ ಟ್ರಾಫಿಕ್ನಲ್ಲೇ ಹೆಂಡತಿಯನ್ನು ಕಾರಿನಲ್ಲಿ ಬಿಟ್ಟು ಓಡಿ ಹೋಗಿರುವ ಘಟನೆ ಮಹದೇವಪುರದಲ್ಲಿ ನಡೆದಿದೆ.
ಪರಾರಿಯಾದವನ ಹೆಸರು ವಿಜಯ್ ಜಾರ್ಜ್. ಚಿಕ್ಕಬಳ್ಳಾಪುರ ಮೂಲದವನು. ಗೋವಾದಲ್ಲಿರುವ ತನ್ನ ಕಂಪನಿಯನ್ನು ನೋಡುಕೊಂಡು ತಂದೆಗೆ ಸಹಾಯ ಮಾಡಿಕೊಂಡು ಹೋಗುತ್ತಿದ್ದನು.
ಮದುವೆ ಮುಗಿಸಿ ಚರ್ಚ್ನಿಂದ ಮನೆಗೆ ಮರಳುತ್ತಿದ್ದರು. ಈ ವೇಳೆ ಕಾರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿತು. ಈ ವೇಳೆ ಕಾರಿನಿಂದ ಕೆಳಗೆ ಇಳಿದು ಜಾರ್ಜ್ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಕಳೆದ ಎರಡು ವಾರಗಳಿಂದ ಹುಡುಕಾಟ ನಡೆಸುತ್ತಿದ್ದಾರೆ.
ಫೆಬ್ರವರಿ 15ರಂದು ವಿಜಯ್ ಮದುವೆಯಾಗಿದ್ದಾನೆ. ಆದರೆ ಫೆಬ್ರವರಿ 16 ರಂದು ಟ್ರಾಫಿಕ್ನಲ್ಲಿ ಹೆಂಡತಿಯನ್ನು ಬಿಟ್ಟು ಕಾರಿನಿಂದ ಇಳಿದು ಓಡಿ ಹೋಗಿದ್ದಾನೆ. ಅಷ್ಟಕ್ಕೂ ಆತ ಓಡಿ ಹೋಗಿದ್ದೇಕೆ ಗೊತ್ತಾ..
ಈ ಹಿಂದೆ ವಿಜಯ್ ಮಹಿಳೆಯೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದ. ತನ್ನ ತಂದೆಯ ಕಂಪನಿಯಲ್ಲಿ ಕೆಲಸ ಮಾಡುವ ಆಟೋ ಚಾಲಕನ ಪತ್ನಿಯೊಂದಿಗಿ ವಿಜಯ್, ಲವ್ವಿಡವ್ವಿ ಇಟ್ಟುಕೊಂಡಿದ್ದ. ಮಹಿಳೆ ಇಬ್ಬರು ಮಕ್ಕಳಿದ್ದು ಅದೇ ಕಂಪನಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಳು.
ಮದುವೆಗು ಮುನ್ನ ವಿಜಯ್, ತನ್ನ ತಪ್ಪನ್ನು ಪತ್ನಿಯ ಮುಂದೆ ಹೇಳಿಕೊಂಡಿದ್ದ. ಎಲ್ಲವನ್ನು ಕ್ಷಮಿಸಿ ಆತನನ್ನು ಮದುವೆ ಆಗಿದ್ದಳು. ಆದರೆ, ಬೇರೊಬ್ಬಳನ್ನು ಮದುವೆ ಆದರೆ, ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಡುವುದಾಗಿ ಮಾಜಿ ಪ್ರೇಯಸಿ ಬೆದರಿಸುತ್ತಿದ್ದಳು. ಇದರಿಂದ ಜಾರ್ಜ್ ತುಂಬಾ ಒತ್ತಡಕ್ಕೆ ಒಳಗಾಗಿದ್ದ.
ಜಾರ್ಜ್ ಪತ್ನಿ ಘಟನೆಯ ಬಗ್ಗೆ ಮಾತನಾಡಿ, ಚರ್ಚ್ನಿಂದ ಮನೆಗೆ ಬರುವಾಗ ಕಾರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿತು. ಈ ವೇಳೆ ಜಾರ್ಜ್ ಕಾರಿನ ಬಾಗಿಲು ತೆರೆದು ಓಡಿ ಹೋದ. ಇದನ್ನು ನೋಡಿ ನಾನು ಆಘಾತಕ್ಕೆ ಒಳಗಾದೆ. ಆತನನ್ನು ಹಿಂಬಾಲಿಸಲು ಯತ್ನಿಸಿದೆ. ಆದರೆ, ಆತ ಸಿಗಲಿಲ್ಲ. ಆತನ ಪರವಾಗಿ ನಿಲ್ಲುವುದಾಗಿ ನಾನು ಮತ್ತು ನನ್ನ ಕುಟುಂಬದವರು ಭರವಸೆ ನೀಡಿದ್ದೆವು. ಆದರೂ ಆತ ಓಡಿ ಹೋಗಿದ್ದಾನೆ ಎಂದು ಹೆಂಡತಿ ದೂರಿನಲ್ಲಿ ತಿಳಿಸಿದ್ದಾಳೆ.