ನಾನು ರಾಜಕಾರಣದಲ್ಲಿ ಇರೋವರೆಗೂ ನನ್ನ ಮಗ ರಾಜಕೀಯಕ್ಕೆ ಬರಲ್ಲ: ಸುಮಲತಾ ಅಂಬರೀಶ್ | JANATA NEWS

ಮಂಡ್ಯ : ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಮಗ ರಾಜಕೀಯಕ್ಕೆ ಬರಲ್ಲ, ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
ಇಂದು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ, ಬಿಜೆಪಿಗೆ ಸಂಪೂರ್ಣ ಬೆಂಬಲ ಸೂಚಿಸಿದ ಸಂಸದೆ ಸುಮಲತಾ ಅಂಬರೀಷ್, ಇದೇ ಸಂದರ್ಭದಲ್ಲಿ ತಮ್ಮ ಪುತ್ರನ ರಾಜಕೀಯ ನಡೆಯ ಬಗ್ಗೆ ಸ್ಪಷ್ಟನೆ ನೀಡಿದರು.
ನಮ್ಮ ಕುಟುಂಬದಲ್ಲಿ ಕುಟುಂಬ ರಾಜಕೀಯ ಮಾಡಿಲ್ಲ. ಚಾಮುಂಡಿ ತಾಯಿ ಮೇಲೆ ಆಣೆ ನಾನು ಅಭಿಷೇಕ್‍ಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲ ಎಂದು ಹೇಳಿದರು. ಅಭಿಷೇಕ್‍ಗೆ ಎರಡು ಪಕ್ಷದಿಂದ ಆಹ್ವಾನ ಬಂದಿತ್ತು. ಮದ್ದೂರು ಮತ್ತು ಮಂಡ್ಯದಿಂದ ಟಿಕೆಟ್ ಕೊಡ್ತೀವಿ ಎಂದು ಎರಡು ಪಕ್ಷಗಳು ಹೇಳಿದವು. ಆದರೆ, ಅಭಿ ಅದನ್ನು ನಿರಾಕರಿಸಿದನು.
ನನಗೆ ತಾಯಿ, ತಂದೆ ಹೆಸರಿನಲ್ಲಿ ಟಿಕೆಟ್ ಬೇಡ. ಜನರಿಗಾಗಿ ದುಡಿದು, ಯಾವುದಾದರೊಂದು ಪಕ್ಷದಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿದ ಬಳಿಕ ಟಿಕೆಟ್ ತೆಗೆದುಕೊಳ್ಳುತ್ತೇನೆ ಅಂತಾ ಆ ಪಕ್ಷದವರಿಗೆ ಹೇಳಿದ ಎಂದು ಸುಮಲತಾ ತಿಳಿಸಿದರು.
ಅಭಿ ಈ ವರ್ಷ ಮದುವೆ ಆಗ್ತಾನೆ ಮತ್ತು ಸಿನಿಮಾದಲ್ಲಿ ಮುಂದುವರಿಯುತ್ತಾನೆ. ಮುಂದೆ ಅವನ ಹಣೆಯಲ್ಲಿ ಏನು ಬರೆದಿದೆಯೋ ಅದು ಆಗಲಿ. ಸಿನಿಮಾದಲ್ಲಿ ಅವನನ್ನು ಕರೆತರವ ಪ್ರಯತ್ನವನ್ನು ಅಂಬರೀಶ್ ಆಗಲಿ, ನಾವಾಗಲಿ ಮಾಡಲಿಲ್ಲ. ಅಲ್ಲೆ ಮಾಡಲಿಲ್ಲ ಅಂದಮೇಲೆ ರಾಜಕೀಯಕ್ಕೆ ಅವನನ್ನು ಕರೆತರುತ್ತೀವಾ? ಎಂದರು.