ಸ್ನೇಹಿತನ ಹೆಂಡತಿಯನ್ನು ಮಂಚಕ್ಕೆ ಕರೆದ ಯುವಕ, ಗಂಡನಿಂದ ಕೊಲೆ | JANATA NEWS

ಬೆಂಗಳೂರು : ಕುಡಿದ ಅಮಲಿನಲ್ಲಿ ಸಿಕ್ಕ ಸಿಕ್ಕವರ ಮನೆಯ ಮೇಲೆ ಹತ್ತಿ, ಕೆಳಗೆ ಇಳಿಯುವಂತೆ ಸೂಚಿಸಿದವರ ಹೆಂಡತಿಯನ್ನು ಮಂಚಕ್ಕೆ ಕಳಿಸುವಂತೆ ಕೇಳಿದ್ದ ಮದ್ಯವ್ಯಸನಿಯ ತಲೆಯನ್ನು ಸೀಳಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಸಿದ್ದಾಪುರದಲ್ಲಿ ನಡೆದಿದೆ.
ಮಣಿಕಂಠ ಎಂಬಾತ ಕೊಲೆಯಾಗಿ ಹೋದ ಪಾನಮತ್ತ ವ್ಯಕ್ತಿ. ಸುರೇಶ್ ಕೊಲೆ ಮಾಡಿದ್ದ ಆರೋಪಿ. ಸಿದ್ಧಾಪುರ ಪೊಲೀಸರು ಸುರೇಶ್‌ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ಸಿದ್ದಾಪುರದ ಕೆ ಎಸ್ ಕಾಲೋನಿಯಲ್ಲಿ ಮದ್ಯವ್ಯಸನಿಯೊಬ್ಬ ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಸಿಕ್ಕ ಬಿಲ್ಡಿಂಗ್ ಹತ್ತಿದ್ದನು. ಬಿಲ್ಡಿಂಗ್ ಹತ್ತಿ ಎದುರುಗಡೆ ಬಂದ ವ್ಯಕ್ತಿಯ ಪತ್ನಿ ಕಳಿಸುವಂತೆ ಅವಾಜ್ ಹಾಕಿದ್ದನು.
ಇದರಿಂದ ಕೋಪಗೊಂಡ ಸುರೇಶ್ ರಿಪೀಸ್ ಪಟ್ಟಿಯಿಂದ ಮಣಿಕಂಠನಿಗೆ ಹೊಡೆದಿದ್ದಾನೆ. ಹೊಡೆತದ ತೀವ್ರತೆಗೆ ಮಣಿಕಂಠನ ತಲೆಗೆ ಗಂಭೀರ ಗಾಯವಾಗಿತ್ತು. ನಂತರ ಮಣಿಕಂಠ ಕುಡಿದು ಬಿದ್ದಿದ್ದಾನೆ ಎಂದು ಆತನ ಕುಟುಂಬಸ್ಥರಿಗೆ ಸುರೇಶ್ ತಿಳಿಸಿದ್ದ. ಅವರು ಮಣಿಕಂಠನನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವಿಗೀಡಾಗಿದ್ದ.
ಕುಡಿದು ಮನೆಯ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸುರೇಶ್ ಕಥೆ ಕಟ್ಟಿ ನಾಟಕವಾಡಿದ್ದನು. ಈ ವೇಳೆ ಮಣಿಕಂಠನ ಮನೆಯವರು ಪೊಲೀಸರಿಗೆ ದೂರು ನೀಡಿದಾಗ ಈ ಬಗ್ಗೆ ಸುರೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜೊತೆಗೆ, ಸ್ಥಳೀಯವಾಗಿದ್ದ ಸಿಸಿಟಿವಿಗಳ ಪರಿಶೀಲನೆ ಮಾಡಿದ್ದಾರೆ. ನಂತರ, ಪೊಲೀಸರ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯವನ್ನು ಸುರೇಶ್ ಹೇಳಿದ್ದಾನೆ. ಸುರೇಶ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿ ತನಿಖೆ ಆರಂಭಿಸಿದ್ದಾರೆ.