ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ಸುಟ್ಟು ಕರಕಲಾದ ಮನೆಯ ವಸ್ತುಗಳು | JANATA NEWS

ಮಂಡ್ಯ : ಚಾರ್ಜ್ ಹಾಕಿದ್ದ ವೇಳೆ ಎಲೆಕ್ಟ್ರಿಕ್ ಸ್ಕೂಟರ್ ಒಂದು ಸ್ಫೋಟಗೊಂಡಿರುವ ಘಟನೆ ಮದ್ದೂರು ತಾಲೂಕಿನ ವಳೆಗೆರೆಹಳ್ಳಿಯಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ಮುತ್ತುರಾಜ್ ಎಂಬುವವರ ಮನೆಯಲ್ಲಿ ಮನೆಯ ಒಳಗಡೆ ನಿಲ್ಲಿಸಲಾಗುತ್ತಿತ್ತು. ಪ್ರತಿನಿತ್ಯ ಸ್ಕೂಟರ್ ಅನ್ನು ಚಾರ್ಜಿಗೆ ಹಾಕುವಂತೆ ನಿನ್ನೆಯೂ ಕೂಡ ಎಲೆಕ್ಟ್ರಿಕ್ ಬ್ಯಾಟರಿಚಾಲಿತ ಸ್ಕೂಟರ್ ಅನ್ನು ಮನೆಯಲ್ಲಿ ಒಂದು ಮೂಲೆಯಲ್ಲಿ ಚಾರ್ಜಿಂಗ್ ಮಾಡಲು ಹಾಕಲಾಗಿದೆ.
ಆದರೆ, ರಾತ್ರಿವೇಳೆ ಚಾರ್ಜ್ ಹಾಕಿದ್ದ ಸ್ಕೂಟರ್ ಕೆಲವೇ ಗಂಟೆಗಳಲ್ಲಿ ಸ್ಫೋಟಗೊಂಡಿದೆ. ಈ ಸ್ಫೋಟದಿಂದ ಬೈಕ್ ಸಂಪೂರ್ಣ ಹಾನಿಯಾಗಿದ್ದು, ಮನೆಯಲ್ಲಿದ್ದ ಇತರೆ ಗೃಹೋಪಯೋಗಿ ವಸ್ತುಗಳೂ ಕೂಡ ಸುಟ್ಟು ಕರಕಲಾಗಿವೆ.
ಇದರಿಂದ ಎಲೆಕ್ಟ್ರಿಕ್ ಸಾಧನಗಳಾದ ಟಿವಿ, ಫ್ರಿಡ್ಜ್, ಫ್ಯಾನ್‌ಗಳು ಹಾಘೂ ಬಲ್ಪ್‌ಗಳು ಸಂಪೂರ್ಣ ಹಾನಿಗೀಡಾಗಿವೆ. ಇನ್ನು ಸ್ಕೂಟರ್ ಪಕ್ಕದಲ್ಲಿಯೇ ಇದ್ದ ಡೈನಿಂಗ್ ಟೇಬಲ್ ಸೇರಿ ಅನೇಕ ಕಟ್ಟಿಗೆಯಿಂದ ಮಾಡಲಾದ ವಸ್ತುಗಳು ಕೂಡ ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೊಡ್ಡ ಪ್ರಮಾಣದ ಶಬ್ದ ಉಂಟಾಗಿದ್ದು, ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಮನೆಯವರು ಹಾಗೂ ಇತರೆ ನೆರೆಹೊರೆಯವರು ಸೇರಿಕೊಂಡು ನೀರಿನಿಂದ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ.