ಮಹಿಳಾ ASI ಜೊತೆ IPS ಅಧಿಕಾರಿ ಅಕ್ರಮ ಸಂಬಂಧ ಆರೋಪ, ಪತಿಯಿಂದ ದೂರು! | JANATA NEWS

ಕಲಬುರ್ಗಿ : IPS ಅಧಿಕಾರಿ ಅರುಣ್ ರಂಗರಾಜನ್ ಅವರು ಮಹಿಳಾ ASI ಅಧಿಕಾರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕಲಬುರ್ಗಿಯಲ್ಲಿರುವಂತ ಪಿಡಬ್ಲ್ಯೂ ಡಿ ಕ್ವಾಟ್ರಾಸ್ ನಲ್ಲಿಯೇ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಹಾಗೂ ಮಹಿಳಾ ಎಎಸ್‌ಐ ಜೊತೆಗೆ ಅರೆ ಬೆತ್ತಲೆಯಾಗಿರುವುದನ್ನು ಕಂಡ ಹೆಡ್ ಕಾನ್ಸ್ ಸ್ಟೇಬಲ್ ಗಂಡನೇ ಶಾಕ್ ಆಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹೆಡ್ ಕಾನ್ಸ್ ಸ್ಟೇಬಲ್ ಗಂಡ ಎಸ್ಪಿಗೆ ದೂರು ನೀಡಿದ್ದಾರೆ.
ಜಿಲ್ಲೆಯ ISD ವಿಭಾಗದಲ್ಲಿ ಕಳೆದ 3 ವರ್ಷಗಳಿಂದ ಈ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಮಹಿಳಾ ಎಎಸ್‌ಐ ಜೊತೆ ಐಪಿಎಸ್ ಅರುಣ್ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಈ ಹಿಂದೆಯು ಇಬ್ಬರು ಏಕಾಂತದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಪತಿಗೆ ಸಿಕ್ಕಿ ಹಾಕಿಕೊಂಡಿದ್ದರು. ಹೀಗಾಗಿ ಎರಡ್ಮೂರು ಬಾರಿ ಪತ್ನಿಗೆ ಹಾಗೂ ಐಪಿಎಸ್ ಅಧಿಕಾರಿಗೆ ಪತಿ ತಿಳಿ ಹೇಳಿದ್ದರು.
ಈ ಸಂಬಂಧ ಹೆಡ್ ಕಾನ್ಸ್ ಸ್ಟೇಬಲ್ ಕಂಟೆಪ್ಪ ನೀಡಿರುವಂತ ದೂರಿನಲ್ಲಿ, ನಾನು 1997ನೇ ಸಾಲಿನಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಹುದ್ದೆಗೆ ನೇಮಕಾತಿಗೊಂಡಿದ್ದೇನೆ. ಕರ್ತವ್ಯದ ವೇಳೆಯಲ್ಲಿ 2005ರಲ್ಲಿ ಪ್ರೀತಿಸಿ ಮಹಿಳಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಸುಜಾತಾಳನ್ನು ಮದುವೆಯಾಗಿದ್ದೆನೆ. ನಮಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ಪತ್ನಿ ಸದ್ಯ ಎಎಸ್‌ಐ ಆಗಿ ಐಎಸ್ ಡಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ. ಐಎಸ್ ಡಿ ಘಟಕದ ಎಸ್ಪಿ ಆಗಿರುವಂತ ಅರುಣ್ ರಂಗರಾಜನ್ ಹಾಗೂ ನನ್ನ ಪತ್ನಿ ನಡುವೆ ಅಕ್ರಮ ಸಂಬಂಧ ಇರೋದು ಗೊತ್ತಾಗಿತ್ತು. ಒಂದೂವರೆ ತಿಂಗಳ ಹಿಂದೆ ನನ್ನ ಸಂಶಯದ ಬಗ್ಗೆ ವಿಚಾರಿಸಿದೆ. ಪತ್ನಿ ಹಾಗೂ ಅರುಣ್ ರಂಗರಾಜನ್ ಐ ವಾನ್ ಶಾಹಿ ರಸ್ತೆಯಲ್ಲಿರುವ ಪಿಡಬ್ಲ್ಯೂ ಡಿ ಕ್ವಾಟ್ರಾಸ್ ನಲ್ಲಿ ಇರುವ ಖಚಿತ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ಹೋಗಿ ನೋಡಿದಾಗ, ನನ್ನ ಪತ್ನಿ ಸುಜಾತಾ, ಅರುಣ್ ರಂಗರಾಜನ್ ಜೊತೆಗೆ ಇದ್ದದ್ದು ಕಂಡು ಬಂದಿತ್ತು ಎಂದಿದ್ದಾರೆ.
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ, ಅರುಣ್ ರಂಗರಾಜನ್ ಪ್ರಶ್ನಿಸಿದಾಗ ನೀನು ಯಾರು ಕೇಳೋದಕ್ಕೆ. ನಮ್ಮ ಇಷ್ಟದಂತೆ ಇದ್ದೇವೆ ಎಂಬುದಾಗಿ ಹೇಳಿದರು. ಅಲ್ಲದೇ ನನ್ನ ಮೇಲೆ ಹಲ್ಲೆ ನಡೆಸಿದರು. ನನಗೆ ಗಾಯಗಳಾಗಿವೆ. ಅಲ್ಲಿಂದ ನಾನು ಹೇಗೋ ತಪ್ಪಿಸಿಕೊಂಡು ಬಂದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಳಿಕ ಬುದ್ಧಿಹೇಳಿ ಮಕ್ಕಳ ಸಲುವಾಗಿ ಪತ್ನಿಯ ಜೊತೆಗೆ ಇದ್ದೆನು. ಮಾರ್ಚ್ 7ರಂದು ಮಧ್ಯಾಹ್ನ ಬಿಡಬ್ಲ್ಯೂ ಕ್ವಾಟ್ರಾಸ್ ನಲ್ಲಿ ಮತ್ತೆ ಅಸಹ್ಯರೀತಿಯಲ್ಲಿ ಅರೆಬೆತ್ತಲೆಯಾಗಿ ಕಂಡು ಬಂದರು. ಅದನ್ನು ನನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದೇನೆ. ಸದ್ಯ ತನ್ನ ಪತ್ನಿ ಹಾಗೂ ಐಪಿಎಸ್ ಅರುಣ್ ರಂಗರಾಜನ್ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.