ಐಪಿಎಸ್ ಅಧಿಕಾರಿ ಸೋಗಿನಲ್ಲಿ 1.75 ಕೋಟಿ ವಂಚಿಸಿದ ನಕಲಿ SP! | JANATA NEWS

ಬೆಂಗಳೂರು : ಎಸ್ಪಿ ಸೋಗಿನಲ್ಲಿ ವ್ಯಕ್ತಿಯೋರ್ವರಿಂದ 1.75 ಕೋಟಿ ರೂಪಾಯಿ ವಂಚಿಸಲಾಗಿದೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುವ ವೆಂಕಟರಮಣಪ್ಪಗೆ 2022ರಲ್ಲಿ ಶ್ರೀನಿವಾಸ್ ಪರಿಚಯವಾಗಿತ್ತು. ಈ ವೇಳೆ ಬೆಂಗಳೂರಿನ ದಕ್ಷಿಣ ವಿಭಾಗದ ಎಎಸ್ಪಿ ಎಂದು ಪರಿಚಯಿಸಿಕೊಂಡಿದ್ದ ಈ ಆರೋಪಿ.
ಕಾಲಕ್ರಮೇಣ ಇಬ್ಬರು ಆತ್ಮೀಯತೆ ಬೆಳೆದಿದೆ. ಜೊತೆಗೆ ಪೊಲೀಸ್ ಠಾಣೆಗೆ ಭೇಟಿ ನೀಡಿ ನಾ ಪ್ರೊಬೆಷನರಿ ಎಸ್ಪಿ ಆದಷ್ಟು ಬೇಗ ನಿಮ್ಮ ಡಿವಿಷನ್ ಗೆ ಬರ್ತಿನಿ ಎಂದಿದ್ದ.
ಐಪಿಎಸ್ ಅಧಿಕಾರಿ ಎಂಬ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಆತ್ಮೀಯತೆ ಬೆಳೆದಿದ್ದು, ನಂತರ ವೆಂಕಟನಾರಾಯಣ , ಶ್ರೀನಿವಾಸ್ ಇನ್ನು ಹಲವರು ಸೇರಿ ಕಾರಿನಲ್ಲಿ ತಿರುಪತಿಗೆ ಹೋಗಿದ್ರಂತೆ. ಈ ವೇಳೆ ತಾನು ಮೈಸೂರಿನಲ್ಲಿರುವ ಲ್ಯಾಂಡ್ ಲಿಟಿಗೇಷನ್ ಹ್ಯಾಂಡಲ್ ಮಾಡುತ್ತಿದ್ದೇನೆ. ಸಕ್ಸಸ್ ಆದರೆ 450 ಕೋಟಿಯಲ್ಲಿ 250 ಕೋಟಿ ಬರುತ್ತೆ. ಎಲ್ಲಾ ಮುಗಿದು ಕೇಸ್ ರೆವಿನ್ಯೂ ಡಿಪಾರ್ಟ್ಮೆಂಟ್ ಬಳಿ ಇದೆ. ಹೀಗಾಗಿ 2.5ಕೋಟಿ ಹಣ ಬೇಕು ಅರೆಂಜ್ ಮಾಡಿ ಕೊಡಿ ಎಂದು ವೆಂಕಟನಾರಾಯಣ ಬಳಿ ಕೇಳಿದ್ದ.
ನಂಬಿದ ವೆಂಕಟ ನಾರಾಯಣ ತನ್ನ ಬಳಿ ಹಾಗೂ ತನ್ನ ಸ್ನೇಹಿತರ ಬಳಿ ಹಣ ಪಡೆದು ಹಂತ ಹಂತವಾಗಿ ಹಣ ನೀಡಿದ್ದರಂತೆ. ದುಡ್ಡು ಸಿಗುತ್ತಿದ್ದಂತೆ ನಕಲಿ ಅಧಿಕಾರಿಯ ಅಸಲಿತ್ತು ಹೊರಬಿದ್ದಿದೆ. ಎಲ್ಲಿಯೂ ಸುಳಿವು ಬಿಡದ ನಕಲಿ ಅಧಿಕಾರಿ ಶ್ರೀನಿವಾಸ್ ಎಲ್ಲರಿಗೂ ಯಾಮಾರಿಸಿ ಎಸ್ಕೇಪ್ ಆಗಿದ್ದಾನೆ.
ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.