ಗಗನಸಖಿ ಅರ್ಚನಾ ಸಾವಿನ ಪ್ರಕರಣಕ್ಕೆ ತಿರುವು: ಪ್ರಿಯಕರ ಆದೇಶ್ ಬಂಧನ | JANATA NEWS

ಬೆಂಗಳೂರು : ನಗರದ ಕೋರಮಂಗಲದಲ್ಲಿ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಗಗನಸಖಿ ಅರ್ಚನಾ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.
ಗಗನಸಖಿ ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬಿಲ್ಡಿಂಗ್ ಮೇಲಿಂದ ತಳ್ಳಿ ಕೊಲೆ ಮಾಡಲಾಗಿದೆ ಅನ್ನೋದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಅರ್ಚನಾಳ ಪ್ರಿಯಕರ ಕಾಸರಗೋಡು ಮೂಲದ ಆದೇಶ್ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದ್ದು ಆತನನ್ನು ಬಂಧಿಸಲಾಗಿದೆ.
ಹಾಗೂ ಕೇರಳ ಮೂಲದ ಆದೇಶ್ ಗೆ ಡೇಟಿಂಗ್ ಆಯಪ್ನಲ್ಲಿ ಪರಿಚಯವಾಗಿ ಇಬ್ಬರು ಪ್ರೀತಿಸುತ್ತಿದ್ದರು. ಅರ್ಚನಾ ದುಬೈನ ಲೇರ್ಲೈನ್ಸ್ನಲ್ಲಿ ಗಗನಸಖಿಯಾಗಿದ್ದರೆ, ಆದೇಶ್ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಮೂಲತ: ಕಾಸರಗೋಡು ಜಿಲ್ಲೆಯವನಾಗಿದ್ದಾನೆ. ಆದೇಶನನ್ನು ನೋಡಲು ಅರ್ಚನಾ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದಳು. ಆದರೆ ಮಾರ್ಚ್ 11ರಂದು ಅರ್ಚನಾ ಆದೇಶ್ ವಾಸವಿದ್ದ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಮೃತಪಟ್ಟಿದ್ದಳು.
ಮಾರ್ಚ್ 11ರ ರಾತ್ರಿ ಅದೇಶ್ ಮತ್ತು ಅರ್ಚನಾ ಇಬ್ಬರೂ ಪಾರ್ಟಿ ಮಾಡಿದ್ದಾರೆ. ನಂತರ ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಮದುವೆ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಅದೇಶ್, ಬಿಲ್ಡಿಂಗ್‌ನ ನಾಲ್ಕನೇ ಮಹಡಿಯಿಂದ ಅರ್ಚನಾಳನ್ನ ತಳ್ಳಿ ಕೊಲೆ ಮಾಡಿದ್ದಾನೆ.
ಕಳೆದ ಮೂರು ತಿಂಗಳಿಂದ ಮದುವೆಯಾಗುವಂತೆ ಅರ್ಚನಾ ಪೀಡಿಸುತ್ತಿದ್ದಳು. ತನ್ನ ಮನೆಯಲ್ಲಿ ಮದುವೆ ತಯಾರಿ ನಡೆದಿದೆ. ಇಬ್ಬರ ಮದುವೆ ಬಗ್ಗೆ ಮಾತಾಡುವಂತೆ ಒತ್ತಾಯಿಸಿದ್ದಳು. ಮೂರು ತಿಂಗಳಿಂದ ಹಲವು ಸಬೂಬು ನೀಡಿ ಆರೋಪಿ ಅದೇಶ್ ಕಾಲಹರಣ ಮಾಡಿದ್ದಾನೆ.
ಕಳೆದ ಮಾರ್ಚ್ 11ರ ರಾತ್ರಿ ಮದುವೆ ವಿಚಾರಕ್ಕೆ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ. ಅರ್ಚನಾ, ಮದುವೆಯಾಗದಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾಳೆ. ಈ ವೇಳೆ ಕುಡಿದ ಅಮಲಿನಲ್ಲಿ ಅದೇಶ್ ಬಿಲ್ಡಿಂಗ್ ಮೇಲಿಂದ ತಳ್ಳಿದ್ದಾನೆ.