ಪ್ರೀತಿ ನಿರಾಕರಿಸಿದಳು ಎಂದು ಪ್ರೇಯಸಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ! | JANATA NEWS

ಬೆಂಗಳೂರು : ಯುವತಿಯನ್ನ ದಿಂಬಿನಿಂದ ಉಸಿರುಗಟ್ಟಿಸಿ ಪ್ರಿಯಕರ ಕೊಲೆ ಮಾಡಿರುವ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಾಲಿನಿ ಎಂಬ ಯುವತಿಯನ್ನು ಆಕೆಯ ಪ್ರಿಯಕರ ಮನೋಜ್ ಎಂಬಾತ ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ. ಬಳಿಕ ಮನೆಗೆ ತೆರಳಿ ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದು, ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮನೋಜ್ ಫೇಸ್ಬುಕ್ನಲ್ಲಿ ಯುವತಿಗೆ ಪರಿಚಯವಾಗಿದ್ದನು. ಇಬ್ಬರು ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇತ್ತೀಚೆಗೆ ಪೋಷಕರು ಯುವತಿಗೆ ಬೇರೆ ಹುಡುಗನ ಜತೆ ಮದುವೆ ಫಿಕ್ಸ್ ಮಾಡಿದ್ದರು. ಹೀಗಾಗಿ ಮನೆಗೆ ಬಂದಿದ್ದ ಮನೋಜ್ ಆಕೆಯ ಜತೆ ಜಗಳವಾಡಿದ್ದನು.
ನಿನ್ನೆ ಸಂಜೆ ಶಾಲಿನಿಯ ಮನೆಯಲ್ಲಿ ಬೇರೆ ಯಾರೂ ಇರದಿದ್ದಾಗ ಬಂದಿದ್ದ ಮನೋಜ್, 'ಮನೆಯವರು ನೋಡಿದ ಹುಡುಗನೊಂದಿಗೆ ಮದುವೆಗೆ ನೀನೇ ಸಮ್ಮತಿಸಿದ್ದೀಯಾ' ಎಂದು ಗಲಾಟೆ ಮಾಡಿದ್ದಾನೆ. ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.