Fri,Mar31,2023
ಕನ್ನಡ / English

ಡ್ರಮ್​ನಲ್ಲಿ ಯುವತಿ ಶವ ಪತ್ತೆ ಕೇಸ್​ಗೆ ಟ್ವಿಸ್ಟ್​; ಮೃತ ಮಹಿಳೆಯ ಗುರುತು ಪತ್ತೆ, ಮೂವರ ಬಂಧನ | JANATA NEWS

16 Mar 2023
451

ಬೆಂಗಳೂರು : ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಡ್ರಮ್​ನಲ್ಲಿ ಶವ ಪತ್ತೆಯಾದ ಪ್ರಕರಣದ ರಹಸ್ಯ ಬೇಧಿಸಿರುವ ರೈಲ್ವೇ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಬೈಯಪ್ಪನಹಳ್ಳಿಯಲ್ಲಿ ತಮನ್ನಾ ಎಂಬಾಕೆಯನ್ನು ಕೊಂದು ಶವವನ್ನು ಡ್ರಮ್​ನಲ್ಲಿ ಬಚ್ಚಿಟ್ಟು ತಲೆಮರಿಸಿಕೊಂಡಿದ್ದರು. ಇದೀಗ ಆರೋಪಿಗಳನ್ನು ರೈಲ್ವೇ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಒಟ್ಟು ಎಂಟು ಜನರಿಂದ ತಮನ್ನಾ ಕೊಲೆ ನಡೆದಿದ್ದು, ಅದರಲ್ಲಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಕಮಾಲ್(21), ತನ್ವೀರ್ ಆಲಂ(28), ಶಾಕೀಬ್(25) ಎಂಬ ಮೂವರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಉಳಿದ ಐವರು ಆರೋಪಿಗಳಾದ ನವಾಬ್, ಜಮಾಲ್, ಮಜರ್, ಅಸ್ಸಾಬ್ ಹಾಗು ಸಬೂಲ್ ತಲೆಮರೆಸಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಕಾರಣಕ್ಕೆ ಪತಿಯ ಹಿರಿಯ ಸಹೋದರನ ನೇತೃತ್ವದಲ್ಲೇ ಹತ್ಯೆ ನಡೆದಿರುವುದು ತನಿಖೆಯ ಸಂದರ್ಭದಲ್ಲಿ ಬಯಲಾಗಿದೆ​.

ಬಿಹಾರ ಮೂಲದ ತಮನ್ನಾಗೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಅಫ್ರೋಜ್ ಎಂಬಾತನೊಂದಿಗೆ ವಿವಾಹವಾಗಿತ್ತು. ವಿಕಲಚೇತನನಾಗಿದ್ದ ಈತನಿಂದ ಎರಡೇ ತಿಂಗಳಿಗೆ ವಿಚ್ಚೇದನ ಪಡೆದಿದ್ದ ತಮನ್ನಾ, ಅಫ್ರೋಜ್​ನ ಚಿಕ್ಕಪ್ಪನ ಮಗ ಇಂತಿಕಾಬ್ ಜೊತೆ ಬೆಂಗಳೂರಿಗೆ ಬಂದಿದ್ದರು. ಇಬ್ಬರೂ ವಿವಾಹವಾಗಿ ಜಿಗಣಿ ಬಳಿ ವಾಸವಿದ್ದರು.

ಆದರೆ, ಆಕೆಯಿಂದ ಕುಟುಂಬದ ನೆಮ್ಮದಿ‌ ಹಾಳಾಯಿತೆಂದು ಇಂತಿಕಾಬ್ ಸಹೋದರ ನವಾಬ್ ಕೋಪಗೊಂಡಿದ್ದ. ಬೆಂಗಳೂರಿಗೆ ಬಂದಿದ್ದ ನವಾಬ್ ಮಾರ್ಚ್ 12ರಂದು ಸಹೋದರ ಇಂತಿಕಾಬ್​ಗೆ ಕರೆ ಮಾಡಿ, ತಮನ್ನಾ ಮತ್ತು ಇಂತಿಕಾಬ್ ದಂಪತಿಯನ್ನ ಬೆಂಗಳೂರು ತೋರಿಸೋದಾಗಿ ಜಿಗಣಿಯಿಂದ ಕರೆಸಿಕೊಂಡಿದ್ದರು.

ಇಂತಿಕಾಬ್, ತಮನ್ನಾ, ನವಾಬ್, ಕಮಾಲ್, ತನ್ವೀರ್ ಆಲಂ, ಶಾಕೀಬ್, ಜಮಾಲ್, ಮಸ್ಸರ್, ಅಸ್ಸಾಬ್, ಸಬೂಲ್ ಎಲ್ಲರೂ ಒಟ್ಟಿಗೆ ಬೆಂಗಳೂರು ಸುತ್ತಾಡಿ, ಮಧ್ಯಾಹ್ನ ಊಟ ಮಾಡಿದ್ದರು. ಆ ಬಳಿಕ ಮಾತನಾಡುತ್ತಾ, "ತಮನ್ನಾಳಿಂದ ನಮ್ಮ ಕುಟುಂಬದ ನೆಮ್ಮದಿ ಹಾಳಾಗಿದೆ. ಆಕೆ ಬೆಂಗಳೂರಿನಲ್ಲಿ ಇರುವುದು ಬೇಡ, ಬಿಹಾರಕ್ಕೆ ಕಳಿಸುತ್ತೇನೆ, ನೀನು ವಾಪಸ್ ನಿನ್ನ ಮನೆಗೆ ಹೋಗು" ಎಂದಿದ್ದ. ಬಳಿಕ ಸಹೋದರ ಇಂತಿಕಾಬ್‌ನನ್ನು ಬೆದರಿಸಿ ವಾಪಸ್ ಜಿಗಣಿಗೆ ಕಳಿಸಿದ್ದ.

ಸಂಜೆ ಕುತ್ತಿಗೆ ಹಿಸುಕಿ, ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಆರೋಪಿಗಳು ಶವದ ಕಾಲು‌ಮುರಿದು ತಾವು ಮೊದಲೇ ಸಿದ್ಧಪಡಿಸಿಕೊಂಡಿದ್ದ ನೀಲಿ ಬಣ್ಣದ ಡ್ರಮ್ಮಿಗೆ ತುಂಬಿ ಸೀಲ್ ಮಾಡಿದ್ದರು. ರಾತ್ರಿ 11:45ರ ಸುಮಾರಿಗೆ ಆಟೋದಲ್ಲಿ ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣಕ್ಕೆ ತೆರಳಿ ಪೋರ್ಟಿಕೋ ಮುಂದೆ ಡ್ರಮ್ ಇಟ್ಟು ಪರಾರಿಯಾಗಿದ್ದರು.

ಆದರೆ ಅದೇ ಡ್ರಮ್ ಮೇಲೆ ಜಮಾಲ್ ಹೆಸರು ಮತ್ತು ವಿಳಾಸ ಪತ್ತೆಯಾಗಿತ್ತು. ಅದೇ ಸ್ಟಿಕ್ಕರ್ ಆಧಾರದ ಮೇಲೆ ಆರೋಪಿಗಳ ಬಂಧಿಸಿದ್ದಾರೆ.

RELATED TOPICS:
English summary :A twist to the case of the discovery of a young woman body in a drum: The identity of the dead woman was found, three people were arrested

ಸಿದ್ದರಾಮಯ್ಯ ಕುರಿತು ಸಿನಿಮಾ, ಪೋಸ್ಟರ್ ಔಟ್
ಸಿದ್ದರಾಮಯ್ಯ ಕುರಿತು ಸಿನಿಮಾ, ಪೋಸ್ಟರ್ ಔಟ್
ಮಚ್ಚು ಹಿಡಿದು ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ
ಮಚ್ಚು ಹಿಡಿದು ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ
ರಸ್ತೆ ದಾಟುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವು
ರಸ್ತೆ ದಾಟುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವು
ವರುಣಾದಲ್ಲೂ ಸಿದ್ದರಾಮಯ್ಯ ಗೆಲುವು ಅಷ್ಟು ಸುಲಭವಲ್ಲ : ಬಿ.ಎಸ್.ಯಡಿಯೂರಪ್ಪ
ವರುಣಾದಲ್ಲೂ ಸಿದ್ದರಾಮಯ್ಯ ಗೆಲುವು ಅಷ್ಟು ಸುಲಭವಲ್ಲ : ಬಿ.ಎಸ್.ಯಡಿಯೂರಪ್ಪ
ನಂದಿನಿ ಮೊಸರು ಪಾಕೆಟ್ ಮೇಲೆ ದಹಿ ಪದ: ಇದು ಕನ್ನಡಿಗರ ಮೇಲೆ ಬಿಜೆಪಿಯ ದಮ್ಮು ತಾಕತ್ತಿನ ಪ್ರದರ್ಶನವೇ?
ನಂದಿನಿ ಮೊಸರು ಪಾಕೆಟ್ ಮೇಲೆ ದಹಿ ಪದ: ಇದು ಕನ್ನಡಿಗರ ಮೇಲೆ ಬಿಜೆಪಿಯ ದಮ್ಮು ತಾಕತ್ತಿನ ಪ್ರದರ್ಶನವೇ?
ದೈವನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕ‌ ಸಾವು
ದೈವನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕ‌ ಸಾವು
ಮುಸ್ಲಿಂ ಸಮುದಾಯಕ್ಕೆ ನಾವು ಅನ್ಯಾಯ ಮಾಡಿಲ್ಲ: ಬಿಎಸ್​ ಯಡಿಯೂರಪ್ಪ
ಮುಸ್ಲಿಂ ಸಮುದಾಯಕ್ಕೆ ನಾವು ಅನ್ಯಾಯ ಮಾಡಿಲ್ಲ: ಬಿಎಸ್​ ಯಡಿಯೂರಪ್ಪ
ಮಧ್ಯಾಹ್ನದ ಬಿಸಿ ಊಟ ಸೇವಿಸಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥ
ಮಧ್ಯಾಹ್ನದ ಬಿಸಿ ಊಟ ಸೇವಿಸಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥ
ನವಜಾತ ಶಿಶುವನ್ನು ದೇವಾಲಯದ ‌ಬಳಿ ಬಿಟ್ಟು ಹೋದ ಪಾಪಿಗಳು!
ನವಜಾತ ಶಿಶುವನ್ನು ದೇವಾಲಯದ ‌ಬಳಿ ಬಿಟ್ಟು ಹೋದ ಪಾಪಿಗಳು!
ಕಳೆದ ಬಾರಿಯಂತೆ ಈ ಬಾರಿಯೂ ಜೆಡಿಎಸ್​-ಬಿಜೆಪಿ ಮ್ಯಾಚ್​ ಫಿಕ್ಸಿಂಗ್
ಕಳೆದ ಬಾರಿಯಂತೆ ಈ ಬಾರಿಯೂ ಜೆಡಿಎಸ್​-ಬಿಜೆಪಿ ಮ್ಯಾಚ್​ ಫಿಕ್ಸಿಂಗ್
ಮೇ 10 ಮತದಾನದ ದಿನ ಅಲ್ಲ, ಭ್ರಷ್ಟಾಚಾರ ತೆಗೆದುಹಾಕುವ ದಿನ: ಡಿ ಕೆ ಶಿವಕುಮಾರ್​
ಮೇ 10 ಮತದಾನದ ದಿನ ಅಲ್ಲ, ಭ್ರಷ್ಟಾಚಾರ ತೆಗೆದುಹಾಕುವ ದಿನ: ಡಿ ಕೆ ಶಿವಕುಮಾರ್​
ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಉಲ್ಲಂಘನೆ!
ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಉಲ್ಲಂಘನೆ!

ನ್ಯೂಸ್ MORE NEWS...