ಸಾರಿಗೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ, ಶೇ.15 ರಷ್ಟು ವೇತನ ಹೆಚ್ಚಳ | JANATA NEWS

ಬೆಂಗಳೂರು : ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಇಂದು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೇ.15 ರಷ್ಟು ವೇತನ ಹೆಚ್ಚಳ ಮಾಡೋಕೆ ನಿರ್ಧಾರ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ 27 ವರ್ಷಗಳಲ್ಲಿ ಅತ್ಯಧಿಕ ವೇತನ ಪರಿಷ್ಕರಣೆಯನ್ನು ನಮ್ಮ ಸರ್ಕಾರ ಈಗ ಮಾಡಿದೆ ಎಂದು ಹೇಳಿದ್ದಾರೆ. ಈ ನಿರ್ಧಾರದಿಂದ ರಾಜ್ಯದ ಎಲ್ಲ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಅಂದಾಜು 550 ಕೋಟಿ ರು ಹೆಚ್ಚುವರಿ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.
ಇದು ನಮ್ಮ ಸಿಬ್ಬಂದಿಗೆ ಶುಭ ಸುದ್ದಿ ಆಗಿದ್ದು, ಸದಾ ಉತ್ತಮ ಜನಸೇವೆಗೆ ಹೆಸರು ಮಾಡಿರೋ ನಮ್ಮ ಸಿಬ್ಬಂದಿ, ತಾವು ನೀಡಿರುವ ಬಂದ್ ಕರೆ ಹಿಂಪಡೆದು ಎಂದಿನಂತೆ ಉತ್ತಮ ಸೇವೆಗಳನ್ನು ಯಾವುದೇ ವ್ಯತ್ಯಯ ಆಗದಂತೆ ಮುಂದುವರಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ರಾಮುಲು ತಿಳಿಸಿದ್ದಾರೆ.
ಇದು ಬಹುದಿನಗಳ ಬೇಡಿಕೆಯಾಗಿದ್ದು, ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರುಗಳು, ಕಾರ್ಮಿಕ ಮುಖಂಡರುಗಳೊಡನೆ ನಿರಂತರ ಸಭೆಗಳ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಮುಖ್ಯಮಂತ್ರಿಗಳು ಈ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಇಂದು ಈ ಕುರಿತು ಆದೇಶ ಆಗಲಿದೆ.(2)#ksrtc #karnatakasarige
— B Sriramulu (@sriramulubjp) March 16, 2023