ದುರದೃಷ್ಟವಶಾತ್ ನಾನು ಒಬ್ಬ ಸಂಸತ್ ಸದಸ್ಯ - ರಾಹುಲ್ ಗಾಂಧಿ : ಮತ್ತೊಂದು ವಿವಾದಕ್ಕೆ ನಾಂದಿ | JANATA NEWS

ನವದೆಹಲಿ : ದುರದೃಷ್ಟವಶಾತ್ ನಾನು ಒಬ್ಬ ಸಂಸತ್ ಸದಸ್ಯನಾಗಿದ್ದೇನೆ, ಎಂದು ಕಾಂಗ್ರೆಸ್ ಮುಖಂಡ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಇಂದು ನವದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಹೇಳಿದರು.
ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸಿದ ತಮ್ಮ ಹೇಳಿಕೆಯಿಂದ ವಿವಾದ ಸೃಷ್ಟಿಸಿದ್ದ ರಾಹುಲ್ ಗಾಂಧಿ ಅವರು, ಯುಕೆಯಿಂದ ಹಿಂದಿರುಗಿದ ನಂತರ, ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ.
ಈ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದುರದೃಷ್ಟವಶಾತ್ ನಾನು ಸಂಸದನಾಗಿದ್ದೇನೆ.
ತಕ್ಷಣವೇ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಮಧ್ಯಪ್ರವೇಶಿಸಿ ರಾಹುಲ್ ಗಾಂಧಿ ಅವರನ್ನು ತಡೆದು, "ದುರದೃಷ್ಟವಶಾತ್ ನಾನು ಸಂಸದ ಎಂದು ಹೇಳುವ ಮೂಲಕ ಅವರು ನಿಮ್ಮ ಮೇಲೆ ತಮಾಷೆ ಮಾಡುತ್ತಾರೆ.
ನಿಮ್ಮ ದುರದೃಷ್ಟವಶಾತ್ ನಾನು ಸಂಸತ್ತಿನ ಸದಸ್ಯ ಎಂದು ಹೇಳಿ" ಎಂದು ಕಿವಿಮಾತು ಹೇಳಿದರು.
ಜೈರಾಮ್ ರಮೇಶ್ ಮಾತನ್ನು ಕೇಳಿದ ತಕ್ಷಣ ರಾಹುಲ್ ಗಾಂಧಿ ತಮ್ಮ ಹೇಳಿಕೆಯನ್ನು ಸರಿಪಡಿಸಿ, "ದುರದೃಷ್ಟವಶಾತ್ ನಾನು ಸಂಸತ್ ಸದಸ್ಯನಾಗಿದ್ದೇನೆ" ಎಂದು ಸ್ಪಷ್ಟಪಡಿಸಿದರು.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಎಲ್ಲೆಡೆ ಅಪಹಾಸ್ಯಕ್ಕೆ ತುತ್ತಾಗಿದೆ.
First he says, "Unfortunately I am an Member of Parliament", then on been corrected, he says, "Unfortunately for you, i am a member of Parliament"
— Rahul Kaushik (@kaushkrahul) March 16, 2023
Both are true actually. It's his misfortune & so of the people of India, that he is a Member of Parliament.pic.twitter.com/YRdM4EhcyL