ವಿದೇಶಕ್ಕೆ ಹೊರಟ ಮಗಳನ್ನು ಪ್ಲೈಟ್ ಹತ್ತಿಸಿ ಬರುವಾಗ 25 ಅಡಿ ಆಳಕ್ಕೆ ಬಿದ್ದ ಕಾರು, ಸ್ಥಳದಲ್ಲೇ ದಂಪತಿ ಸಾವು | JANATA NEWS

ಕೋಲಾರ : ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರ ಮೂಲದ ದಂಪತಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರ ಕ್ರಾಸ್ ನಲ್ಲಿ ಬಳಿ ನಡೆದಿದೆ. ಕಾರಿನಲ್ಲಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ದಂಪತಿಯನ್ನು ಆಂಧ್ರ ಪ್ರದೇಶದ ಮದನಪಲ್ಲಿಯ ಶಫಿ (55) ಮತ್ತು ಶಾಮಾ (50) ಎಂದು ಗುರುತಿಸಲಾಗಿದೆ.
ಕಾರು ಬೆಂಗಳೂರಿನಿಂದ ಮದನಪಲ್ಲಿಗೆ ತೆರಳುತ್ತಿತ್ತು. ವಿದೇಶಕ್ಕೆ ಹೋಗುತ್ತಿದ್ದ ಮಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿ ಅಂಧ್ರ ಪ್ರದೇಶದ ಮದನಪಲ್ಲಿಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಶ್ರೀನಿವಾಸಪುರದ ಲಕ್ಷ್ಮೀಪುರ ಕ್ರಾಸ್ನಲ್ಲಿ ರಸ್ತೆಯ ಬಲ ಬದಿಯ 20 ರಿಂದ 25 ಅಡಿ ಹಳ್ಳಕ್ಕೆ ಕಾರು ಬಿದ್ದಿದೆ. ಪರಿಣಾಮ ದಂಪತಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.