ಉರಿಗೌಡ, ನಂಜೇಗೌಡ್ರು ಟಿಪ್ಪುನನ್ನು ಕೊಂದಿರುವುದು ಐತಿಹಾಸಿಕ ಸತ್ಯ | JANATA NEWS

ಧಾರವಾಡ : ಟಿಪ್ಪು ಕೊಂದಿದ್ದು ಉರಿಗೌಡ, ನಂಜೇಗೌಡ ಎಂಬುದು ಐತಿಹಾಸಿಕ ಸತ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಇಂದು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಮಾತನಾಡಿದ ಸಿಟಿ ರವಿ, ಉರಿಗೌಡ, ನಂಜೇಗೌಡ್ರು ಟಿಪ್ಪುನನ್ನು ಕೊಂದಿರುವುದು ಐತಿಹಾಸಿಕ ಸತ್ಯ. ಟಿಪ್ಪು ಹಾಸನಕ್ಕೆ ಇಟ್ಟ ಹೆಸರು ಕೈಮಾಬಾದ್, ಹಾಸನಕ್ಕೆ ಕೈಮಾಬಾತ್ ಎಂದು ಕರೆಯುವುದಕ್ಕೆ ಕುಮಾರಸ್ವಾಮಿಗೆ ಇಷ್ಟ ಇರಬಹುದು ಎಂದು ಟಾಂಗ್ ಕೊಟ್ಟರು.
ಟಿಪ್ಪು ಬದುಕಿದ್ದರೆ ಕೈಮಾಬಾದ್ ಎಂದು ಕರೆಯೋಕೆ ಹೆಚ್.ಡಿ.ಕೆಗೆ ಇಷ್ಟ. ಕುಮಾರಸ್ವಾಮಿಗೆ ಹಾಸನವನ್ನು ಕೈಮಾಬಾದ್ ಎಂದು ಕರೆಯೋಕೆ ಇಷ್ಟ ಎಂದಿದ್ದಾರೆ. ರಾಜ್ಯದ 140ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ರಥಯಾತ್ರೆ ಮಾಡಿದ್ದೇವೆ, ವಿಜಯಸಂಕಲ್ಪ ಯಾತ್ರೆಯಲ್ಲಿ ಅಭೂತಪೂರ್ವ ಜನಬೆಂಬಲ ಸಿಕ್ಕಿದೆ.
ಬಿಜೆಪಿ ಅತಿ ಹೆಚ್ಚು ಸೀಟ್ ಗೆದ್ದು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೆ, ಕೆಲವರಿಗೆ ವೋಟ್ ಮೊದಲು ಆದರೆ ನಮಗೆ ರಾಷ್ಟ್ರ ಮೊದಲು ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಹೇಳಿದ್ದಾರೆ. ಅಭಿವೃದ್ಧಿಯಲ್ಲಿ ಯಾರೂ ನಮ್ಮನ್ನ ಹಿಂದೆ ಹಾಕುವುದಕ್ಕೆ ಆಗುವುದಿಲ್ಲ. ಪ್ರತಿ ಕ್ಷೇತ್ರದಲ್ಲಿ ಶೇ.70 ರಿಂದ 80 ರಷ್ಟು ಸರ್ಕಾರದ ಫಲಾನುಭವಿಗಳಿದ್ದಾರೆ. ಫಲಾನುಭವಿಗಳಷ್ಟೇ ಮತ ಹಾಕಿದ್ರೆ ಸಾಕು ಕಾಂಗ್ರೆಸ್ ಠೇವಣಿ ಕಳೆದುಕೊಳ್ಳುತ್ತದೆ ಎಂದಿದ್ದಾರೆ.
ನಾವು ಸರ್ಕಾರದ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಜನರ ಮುಂದೆ ಇಟ್ಟಿದ್ದೇವೆ. ಜೊತೆಗೆ ಪಕ್ಷದ ಸಿದ್ಧಾಂತ ಮತ್ತು ಬದ್ಧತೆ ಮುಂದಿಟ್ಟು ಬಹುಮತ ಕೇಳ್ತಿದ್ದೇವೆ. ನಾವು ಯಾವುದೇ ಜಾತಿ ತಾರತಮ್ಯ ಮಾಡದೆ ಯೋಜನೆ ತಲುಪಿಸಿದ್ದೇವೆ. ಯಾವತ್ತೋ ಸಾಲ ಮನ್ನಾ ಮಾಡಿರೋದನ್ನೆ ಇಂದಿಗೂ ಕೆಲವರು ಹೇಳುತ್ತಿದ್ದಾರೆ ಎಂದು ಸಿಟಿ ರವಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ವ್ಯಂಗ್ಯವಾಡಿದ್ದಾರೆ.