ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಸಿಗರೇಟ್ ಸೇದಿ ಇಳಿಯುತ್ತಿದ್ದಂತೆ ಅರೆಸ್ಟ್ ಆದ ವ್ಯಕ್ತಿ | JANATA NEWS

ಬೆಂಗಳೂರು : ವಿಮಾನದಲ್ಲೇ ಈತ ಸಿಗರೇಟ್ ಸೇದಿದ್ದ ಪ್ರಯಾಣಿಕ ಶೇಹರಿ ಚೌದರಿ ಎಂಬಾತ ಆತಂಕ ಸೃಷ್ಟಿಸಿದ್ದಾನೆ. 6E 716 ಇಂಡಿಗೂ ವಿಮಾನದಲ್ಲಿ ಮಧ್ಯರಾತ್ರಿ 01:30 ರ ವೇಳೆ ಈ ಘಟನೆ ನಡೆದಿದೆ.
ವಿಮಾನದ ಶೌಚಾಲಯದಲ್ಲಿ ಹೊಗೆ ಮತ್ತು ವಾಸನೆ ಬಂದ ಹಿನ್ನೆಲೆ ವಿಮಾನದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರಯಾಣಿಕ ಸಿಗರೇಟ್ ಸೇದಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೆ ಏರ್‌ಲೈನ್ಸ್ ಸಿಬ್ಬಂದಿ ಪ್ರಯಾಣಿಕನನ್ನು ಭದ್ರತಾ ಪಡೆಯ ವಶಕ್ಕೆ ಒಪ್ಪಿಸಿದ್ದಾರೆ.
ಏರ್ಪೋಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
English summary :A man was arrested while smoking a cigarette in a plane coming to Bangalore