ಬೈಕ್ ಗೆ ಲಾರಿ ಡಿಕ್ಕಿ, ಸ್ಕೂಟರ್ ನಲ್ಲಿದ್ದ ತಂದೆ ಮಗಳು ಸ್ಥಳದಲ್ಲೇ ಸಾವು | JANATA NEWS

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66 ರ ನಂತೂರಿನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ತಂದೆ, ಮಗಳಿಗೆ ಯಮರೂಪಿಯಾಗಿ ಬಂದಂತ ಲಾರಿಯೊಂದು, ಡಿಕ್ಕಿಯಾಗಿದೆ. ಈ ಪರಿಣಾಮ ಸ್ಥಳದಲ್ಲಿಯೇ ಬೈಕ್ ನಲ್ಲಿದ್ದಂತ ತಂದೆ, ಮಗಳು ಸಾವನ್ನಪ್ಪಿರೋ ಘಟನೆ ನಡೆದಿದೆ.
ಮಂಗಳೂರು ನಗರದ ನಂತೂರು ಜಂಕ್ಷನ್ ಬಳಿಯಲ್ಲಿ ಅತೀ ವೇಗವಾಗಿ ಬಂದಂತ ಲಾರಿಯೊಂದು ಬೈಕ್ ಸವಾರರಿಗೆ ಡಿಕ್ಕಿಯಾಗಿದೆ. ಲಾರಿ ಡಿಕ್ಕಿಯಿಂದಾಗಿ ಬೈಕ್ ನಲ್ಲಿದ್ದಂತ ತಂದೆ, ಮಗಳು ಕೆಳಗೆ ಬಿದ್ದಿದ್ದಾರೆ. ಅವರ ಮೇಲೆಯೇ ಲಾರಿ ಹರಿದು ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.
ಮೃತರನ್ನು ತಂದೆ ಸ್ಯಾಮ್ಯೂಯೆಲ್ ಜೇಸುದಾಸ್ (67) ಹಾಗೂ ಅವರ 30 ವರ್ಷದ ಮಗಳು ಎಂಬುದಾಗಿ ತಿಳಿದು ಬಂದಿದೆ. ಕದ್ರಿ ಠಾಣೆಯ ಪೊಲೀಸರು ಚಾಲಕನನ್ನು ತಮ್ಮ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
English summary :A lorry collided with a bike, the father and daughter on the scooter died on the spot