ಸಿದ್ದರಾಮಯ್ಯ ಬೇರೆ ರಾಜ್ಯ ಅಥವಾ ಬೇರೆ ದೇಶ ನೋಡಿಕೊಂಡರೆ ಒಳ್ಳೆಯದು! | JANATA NEWS

ಬಳ್ಳಾರಿ : ವಿಪಕ್ಷನಾಯಕ ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ. ಸಿದ್ದರಾಮಯ್ಯ ಪಾಕಿಸ್ತಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶಕ್ಕೆ ಹೋಗಿ ಸ್ಪರ್ಧಿಸಲಿ. ಬಹುಶಃ ಆ ದೇಶಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗೆಲ್ಲಬಹುದು ಎಂದು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
224 ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲು ಚಾನ್ಸೇ ಇಲ್ಲ. ಯಾಕೆಂದರೆ ಅವರು ಎಲ್ಲಿ ಹೋದರೂ ಸೋಲುತ್ತಾರೆ, ಯಾವುದೇ ಒಂದು ಕ್ಷೇತ್ರದಲ್ಲಿ ನಿಂತಿಲ್ಲ. ಸಿದ್ದರಾಮಯ್ಯ ಈಗಾಗಲೇ ವರುಣ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆ. ಈಗ ಬಾದಾಮಿ ಬಿಟ್ಟು ಓಡಿ ಬಂದಿದ್ದಾರೆ. ಅವರು ಕೋಲಾರದಲ್ಲಿ ಗೆಲ್ಲುವುದೂ ಕಷ್ಟವಿದೆ.
ಸಿದ್ದರಾಮಯ್ಯ ಬೇರೆ ರಾಜ್ಯ ಅಥವಾ ಬೇರೆ ದೇಶವನ್ನು ನೋಡಿಕೊಂಡರೆ ಒಳ್ಳೆಯದು. ಇಲ್ಲಿ ಅವರನ್ನು ಎಲ್ಲಿಯೂ ನಿಲ್ಲಲು ಬಿಡುವುದಿಲ್ಲ. ಅವರ ಪಕ್ಷದವರೇ ಅವರಿಗೆ ವಿಲನ್, ಡಿ.ಕೆ.ಶಿವಕುಮಾರ್ ಅವರನ್ನು ಸೋಲಿಸುತ್ತಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆ ಮೂಲಕ ಜನ ಜಾಗೃತಿ ಮಾಡುತ್ತಿದ್ದೇವೆ. 224 ಕ್ಷೇತ್ರಗಳನ್ನು ತಲುಪಿರೋದು ಬಿಜೆಪಿ ಮಾತ್ರ. ಬಿಜೆಪಿಯಲ್ಲಿ ಬಹಳಷ್ಟು ಜನ ರಾಜ್ಯ ಹಾಗೂ ಕೇಂದ್ರ ನಾಯಕರಿದ್ದಾರೆ. ಆದರೆ ಕಾಂಗ್ರೆಸ್ಗೆ ಕೇವಲ ಇಬ್ಬರು ಮಾತ್ರ. ಕಾಂಗ್ರೆಸ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಿಟ್ಟರೆ ಮೂರನೇ ನಾಯಕನಿಲ್ಲ. ಅವರು 224 ಕ್ಷೇತ್ರಕ್ಕೆ ಹೋಗಿಲ್ಲ, ಟಿಕೆಟ್ ಹಂಚಿಕೆಯಲ್ಲಿ ಬ್ಯೂಸಿ ಇದ್ದಾರೆ. ಕಾಂಗ್ರೆಸ್ನವರು ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಮತ್ತೊಮ್ಮೆ ಅಧಿಕಾರದ ರುಚಿ ನೋಡಬೇಕೆಂದು ಕನಸು ಕಾಣುತ್ತಿದ್ದಾರೆ. 50 ವರ್ಷದ ಇವರ ಆಳ್ವಿಕೆ ನೋಡಿ ಜನರು ಬದಲಾವಣೆ ಬಯಸಿದ್ದಾರೆ ಎಂದರು.