ನನ್ನ ಕ್ಷೇತ್ರದ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ, ಹೈಕಮಾಂಡ್ ಸೂಚಿಸಿದ ಕಡೆ ಸ್ಪರ್ಧಿಸುವೆ: ಸಿದ್ದರಾಮಯ್ಯ | JANATA NEWS

ಬೆಂಗಳೂರು : ಹೈಕಮಾಂಡ್ ಸೂಚಿಸದ ಕಡೆ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕ್ಷೇತ್ರ ಗೊಂದಲದ ಬಗ್ಗೆ ಮಾತನಾಡಿ, ಕೋಲಾರದಲ್ಲಿ ಸರ್ವೆಗಳಲ್ಲಿ ಹಿನ್ನಡೆ ಆಗಿದೆ ಅನ್ನೋದು ಊಹಾಪೋಹ. ಉಹಾಪೋಹಗಳಿಗೆ ಬೆಲೆ ಇಲ್ಲ.ನನ್ನ ಕ್ಷೇತ್ರದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.
ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಈ ತಿಂಗಳು 22ಕ್ಕೆ ಪಟ್ಟಿ ಬಿಡುಗಡೆ ಆಗಲಿದೆ ಅಂದು ಯುಗಾದಿ ಹಬ್ಬ ಒಳ್ಳೆ ದಿನ ಬಿಡುಗಡೆಯಾಗುತ್ತೆ ಎಂದರು.
ಬಳಿಕ ಹಾಲಿ ಶಾಸಕರ ಟಿಕೆಟ್ ವಿಚಾರವಾಗಿ ಮಾತನಾಡಿ, ಇನ್ನು ಹಾಲಿ ಶಾಸಕರದ್ದು ಟಿಕೆಟ್ ಫೈನಲ್ ಆಗಿಲ್ಲ. ಒಂದು ಹೆಸರಿರೋ ಮತ್ತು ಗೊಂದಲ ಇಲ್ಲದ ಕಡೆ ಟಿಕೆಟ್ ಫೈನಲ್ ಆಗಿದೆ. ವರುಣಾ ಕ್ಷೇತ್ರದಿಂದ ಈಗ ಯತೀಂದ್ರ ಇದ್ದು ಈ ಕ್ಷೇತ್ರದಿಂದ ಸದ್ಯ ಇದು ಒಂದೇ ಹೆಸರು ಇರೋದು ಎಂದರು. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ನಾಯಕರ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ, ಪಕ್ಷಕ್ಕೆ ಬಿಜೆಪಿಯಿಂದ ಇನ್ನಷ್ಟು ನಾಯಕರು ಬರಬಹುದು ಎಂದು ಹೇಳಿದರು.
ನಾನು ಎಲ್ಲಿ ನಿಂತುಕೊಳ್ಳಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತೆ. ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿ ನಿಂತುಕೊಳ್ಳುತ್ತೇನೆ ಎಂದರು. ಸಿದ್ದರಾಮಯ್ಯ ಭಾನುವಾರದ ಕೋಲಾರ ಪ್ರವಾಸ ರದ್ದಾಗಿದೆ. ಈ ಬಗ್ಗೆ ಮಾತನಾಡಿ, ಕೋಲಾರಕ್ಕೆ ಹೋಗ್ತಿಲ್ಲ, ರದ್ದು ಮಾಡಿದ್ದೀರಿ. ಭಾನುವಾರ ಬೆಳಗಾವಿಗೆ ಹೋಗ್ತಿದೀನಿ ಹಾಗಾಗಿ ಕೋಲಾರ ಪ್ರವಾಸ ರದ್ದು ಮಾಡಿದ್ದೇನೆ ಎಂದರು.