ಉರಿಗೌಡ, ನಂಜೇಗೌಡಗೆ ತಂದೆ ಸಿಟಿ ರವಿ, ತಾಯಿ ಅಶ್ವತ್ಥ ನಾರಾಯಣ: ಆಧಾರ್ ಬಿಡುಗಡೆ ಮಾಡಿದ ಕಾಂಗ್ರೆಸ್! | JANATA NEWS

ಬೆಂಗಳೂರು : ಉರಿಗೌಡ, ನಂಜೇಗೌಡರ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಸ್ ಪಕ್ಷಗಳು ನಡುವೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇಬ್ಬರು ವ್ಯಕ್ತಿಗಳು ಟಿಪ್ಪು ಸುಲ್ತಾನ್ ಅವರನ್ನು ಕೊಂದರು ಎಂದು ಬಿಜೆಪಿ ಪ್ರಚಾರ ನೀಡುತ್ತಿದೆ. ಆದರೆ, ಇದನ್ನು ಅಲ್ಲಗೆಳೆದಿರುವ ಕಾಂಗ್ರೆಸ್ ವಿಭಿನ್ನ ಪೋಸ್ಟರ್ ಮೂಲಕ ಬಿಜೆಪಿ ಕಾಲೆಳೆದಿದೆ.
ಉರಿಗೌಡ ಮತ್ತು ನಂಜೇಗೌಡರಿಗೆ ಅಶ್ವಥ್ ನಾರಾಯಣ್ ತಾಯಿ ಹಾಗೂ ಸಿ.ಟಿ.ರವಿ ತಂದೆ. ಇವರಿಬ್ಬರೂ ಹುಟ್ಟಿದ್ದು ಚುನಾವಣೆ ಹತ್ತಿರ ಬಂದಾಗ. ಇವರ ಜನ್ಮಸ್ಥಳ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ. ಆಧಾರ್ ಸಂಖ್ಯೆ: 420 420 420 420 ಆಗಿದೆ. ಅನೇಕ ಸಂಶೋಧನೆ ಬಳಿಕ ಉರಿಗೌಡ ನಂಜೇಗೌಡರ ಆಧಾರ್ ಕಾರ್ಡ್ ಸಿಕ್ಕಿದೆ ಎಂದು ಬಿಜೆಪಿಗೆ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.
ಕೋಲಾರ ನಮ್ಮೂರು ಸಿದ್ದರಾಮಯ್ಯ ನಮ್ಮೋರು ಟೀಂ ನಿಂದ ಆಧಾರ್ ಕಾರ್ಡ್ ಬಿಡುಗಡೆ ಮಾಡಿದೆ. ಈ ಆಧಾರ್ ಕಾರ್ಡ್ಗಳು ಸೋಶಿಯಲಗ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಈ ಬಗ್ಗೆ ಬಿಜೆಪಿ ವಿರುದ್ಧ ಕಿಡಿಕಾರಿವೆ. ಇದರಲ್ಲಿ ಒಂದು ಹೆಜ್ಜೆ ಮುಮದೆ ಹೋಗಿರುವ ಕಾಂಗ್ರೆಸ್ ಉರಿಗೌಡ, ನಂಜೇಗೌಡ ಹೆಸರಲ್ಲಿ ಅಣಕು ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಬಿಡುಗಡೆ ಮಾಡಿ ಬಿಜೆಪಿ ಕಾಲೆಳೆದಿದೆ.