ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವು! | JANATA NEWS

ಬೆಳಗಾವಿ : ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನಡೆದಿದೆ.
ಶ್ರೀಧರ್ ಪಾರಿಸ್ ಹೊಸೂರು (15), ಹರ್ಷಿತಾ ಶೀತಲ ಚಿಪ್ಪಾಡಿ (8) ಮೃತ ಮಕ್ಕಳು.
ಯುಗಾದಿ ಹಬ್ಬದ ಪ್ರಯುಕ್ತ ಮಕ್ಕಳು ಗ್ರಾಮದ ಹೊರವಲಯದಲ್ಲಿ ಇರುವ ದೇವರ ದರ್ಶನಕ್ಕೆ ಹೋಗಿದ್ದರು. ಈ ವೇಳೆ ದೇವಸ್ಥಾನದ ಆವರಣದಲ್ಲಿ ಕುಳಿತು ಊಟ ಮಾಡಿ, ಪ್ಲೇಟು ತೊಳೆಯಲು ಪಕ್ಕದ ಕೃಷಿ ಹೊಂಡಕ್ಕೆ ಹರ್ಷಿತಾ ಇಳಿದಾಗ ಕಾಲು ಜಾರಿ ಬಿದ್ದಿದ್ದಾಳೆ, ಇದನ್ನು ಗಮನಿಸಿದ ಸ್ನೇಹಿತ ಶ್ರೀಧರ್, ಹರ್ಷಿತಾಳನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ಶ್ರೀಧರ್ ಕೂಡಾ ಕಾಲು ಜಾರಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾನೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
English summary :Two children died after falling into a farm pit