ತಡೆಗೋಡೆ ನಿರ್ಮಾಣದ ವೇಳೆ ಬರೆ ಕುಸಿತ: ಮೂವರು ಕಾರ್ಮಿಕರ ದುರ್ಮರಣ | JANATA NEWS

ಮಂಗಳೂರು : ತಡೆಗೋಡೆ ನಿರ್ಮಾಣದ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಬರೆ ಕುಸಿದು ಮಣಿನಡಿ ಮೂವರು ಕಾರ್ಮಿಕರು ಸಿಲುಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗಾಂಧಿನಗರದ ಗುರುಂಪು ಬಳಿ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇಗೊಡ್ಡೆಟ್ಟಿ ಸೋಮಶೇಖರ್ ರೆಡ್ಡಿ (45), ಅವರ ಪತ್ನಿ ಶಾಂತಕ್ಕ (35), ಇನ್ನೊರ್ವ ಯುವಕ ( ಓರ್ವರ ಹೆಸರು ತಿಳಿದುಬರಬೇಕಷ್ಟೆ) ಮೃತರು ಎಂದು ತಿಳಿದುಬಂದಿದೆ.
ಅಬೂಬಕ್ಕರ್ ಎಂಬುವರ ಮನೆಯ ಹಿಂದೆ ಬೃಹತ್ತಾದ ಬರೆ ತೆಗೆಯಲಾಗಿತ್ತು. ಅದರ ಅಡಿ ಫಿಲ್ಲರ್ ಹಾಕಿ ತಡೆಗೋಡೆ ನಿರ್ಮಾಣ ಮಾಡಲೆಂದು ಸೆಂಟ್ರಿಂಗ್ ಕೆಲಸ ನಡೆಯುತ್ತಿತ್ತು. ಕಾರ್ಮಿಕರು ಇಂದು ಕೆಲ ನಿರ್ವಹಿಸುವ ವೇಳೆ ಒಮ್ಮೆಲೇ ಮಣ್ಣು ಕುಸಿದು ಬಿದ್ದಿದೆ. ಳಗಡೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮಣ್ಣಿನಡಿ ಸಿಲುಕಿದರು.
ಘಟನೆ ವೇಳೆ ಏಳು ಮಂದಿ ಸ್ಥಳದಲ್ಲಿದ್ದು ನಾಲ್ವರು ಓಡಿ ಪಾರಾಗಿದ್ದು, ಮೂವರು ಮಣ್ಣಿನಡಿ ಸಿಲುಕಿದ್ದರು. ಘಟನೆ ನಡೆದ ಕೂಡಲೇ ಜೆಸಿಬಿ ಮೂಲಕ ಮಣ್ಣಿನಡಿ ಸಿಲುಕಿದ್ದವರ ಹೊರತೆಗೆಯಲು ಕಾರ್ಯಾಚರಣೆ ಆರಂಭಿಸಲಾಗಿದ್ದು, ಮಣ್ಣಿನಡಿ ಸಿಲುಕಿದ್ದವರನ್ನು ಹೊರತಗೆಯುವ ವೇಳೆಗೆ ಮೂವರು ಅವರು ಮೃತಪಟ್ಟಿದ್ದರು ಎನ್ನಲಾಗಿದೆ.