ದೇವನಹಳ್ಳಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ, ಕ್ರೀಡಾ ಕಿಟ್ ಪತ್ತೆ! | JANATA NEWS

ಬೆಂಗಳೂರು : ವಿಧಾನಸಭೆ ಚುನಾವಣೆ ಹತ್ತಿರದಲ್ಲಿದ್ದು, ರಾಜಕೀಯ ನಾಯಕರು ಮತದಾರರನ್ನು ಸೆಳೆಯಲು ನಾನಾ ತಂತ್ರ, ಕಸರತ್ತುಗಳನ್ನು ಮಾಡುತ್ತಿದ್ದಾರೆ.
ಮತದಾರರಿಗೆ ಆಮಿಷಕ್ಕಾಗಿ ಹಣ, ಹೆಂಡ , ಸಾಮಾಗ್ರಿಗಳು ಪತ್ತೆಯಾಗಿವೆ. ಅದರಂತೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಂಚಬೇಕೆಂದು ಯಲಹಂಕದ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಹಣ ಪೊಲೀಸರು ವಶಕ್ಕೆ ಪಡೆಸಿಕೊಂಡಿದ್ದಾರೆ.
ಪೊಲೀಸರ ದಾಳಿ ವೇಳೆ 3.60 ಲಕ್ಷ ರೂ. ಮೌಲ್ಯದ 450 ಹೆಲ್ಮೆಟ್ಸ್, 1.40 ಲಕ್ಷ ರೂ. ಬೆಲೆಯ 35 ಕ್ರೀಡಾ ಕಿಟ್ಗಳು, 25,000 ರೂ. ಮೌಲ್ಯದ ಹೊದಿಕೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಸಂಪಿಗೆಹಳ್ಳಿ ಪೊಲೀಸರು ಕಾಂಗ್ರೆಸ್ ನಾಯಕ ಸೈಯದ್ ಸಾದಿಕ್ ಅವರಿಗೆ ಸೇರಿದ 90,000 ರೂ. ಮೌಲ್ಯದ 150 ರೇಶನ್ ಕಿಟ್ಗಳನ್ನು ಜಪ್ತಿ ಮಾಡಿದ್ದಾರೆ.
ಇನ್ನು ಮೊತ್ತೊಂದು ಪ್ರಕರಣದಲ್ಲಿ ದೇವನಹಳ್ಳಿ ಪೊಲೀಸರು, ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸಾಗಿಸುತ್ತಿದ್ದ ದಾಖಲೆ ಇಲ್ಲದ 1.42 ಲಕ್ಷ ರೂ.ವನ್ನು ಕಬ್ಜ ಮಾಡಿಕೊಂಡಿದ್ದಾರೆ. ಜೊತೆಗೆ 6.45 ಲಕ್ಷ ರೂ. ಮೌಲ್ಯದ ತಂಬಾಕು ಮತ್ತು 14 ಸಾವಿರ ಮೌಲ್ಯದ 35.5 ಲೀಟರ್ ಸಾರಾಯಿಯನ್ನು ಜಪ್ತಿ ಮಾಡಿದ್ದಾರೆ.